ಕಿರಣ್ ಮಜುಂದಾರ್ ಷಾ 
ಜಿಲ್ಲಾ ಸುದ್ದಿ

ಇಂದಿನ ಯುಗವೇ ಸ್ಪರ್ಧಾತ್ಮಕ : ಬಯೋಕಾನ್ ಸಿಇಒ ಕಿರಣ್ ಮಜುಂದಾರ್ ಷಾ

ಇದು ಸಂಘರ್ಷದ ಕಾಲವಾಗಿದ್ದು, ನಾವು ಮಾಡುವ ಯಾವುದೇ ಕೆಲಸದಲ್ಲೂ ಸಂಘರ್ಷ ಎದುರಿಸುತ್ತಿರುವ ಅನುಭವವಾಗುತ್ತಿದೆ....

ಬೆಂಗಳೂರು: ಇದು ಸಂಘರ್ಷದ ಕಾಲವಾಗಿದ್ದು, ನಾವು ಮಾಡುವ ಯಾವುದೇ ಕೆಲಸದಲ್ಲೂ ಸಂಘರ್ಷ ಎದುರಿಸುತ್ತಿರುವ ಅನುಭವವಾಗುತ್ತಿದೆ ಎಂದು ಬಯೋಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಮಜುಂದಾರ್ ಷಾ ಅಭಿಪ್ರಾಯಪಟ್ಟರು. ಮೌಂಟ್  ಕಾರ್ಮೆಲ್ ಕಾಲೇಜಿನಲ್ಲಿ ಗುರುವಾರ ನಡೆದ ಹರಿ ಪರಮೇಶ್ವರ್ ರಚನೆಯ `ದಿ ಪಿಲ್ಲರ್ ಇನ್ವಿಸಿಬಲ್' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ``ನಾಗರಿಕರ ಬದ್ಧತೆ ಮತ್ತು ಸಕ್ರಿಯತೆ ಹೇಗಿರಬೇಕೆಂಬುದರಲ್ಲಿ ಸಂಘರ್ಷ ಏರ್ಪಡುತ್ತಿದೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಸಮನೆ ಓಡುತ್ತಿರುವ ಜನ ಜೀವನದಿಂದಾಗಿ ಸಂಘರ್ಷ ಏರ್ಪಟ್ಟಿರಬಹುದೆ ಎಂಬ ಸಂದೇಹ ಬರುತ್ತದೆ. ಸಮಾಜ ನಿರ್ಮಾಣದಲ್ಲಿ ಸಂವೇದನಶೀಲತೆಯನ್ನು ತರುವುದೇ ಸವಾಲಾಗುತ್ತಿದೆ ಎಂದರು. ``ಈ ಸಮಾಜವನ್ನು ನಾವೇ ಬದಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾದರೂ, ನಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾಗುವ ಕೆಲಸಗಳನ್ನಾದರೂ ಮಾಡಬೇಕು. ಉತ್ತಮ ಸಮಾಜದ ಕಲ್ಪನೆಗೆ ಬೆಂಗಳೂರು ನಗರ ಉದಾಹರಣೆಯಾಗಿ ಕಾಣಿಸುತ್ತಿದೆ. ಅದರ ಕುರುಹುಗಳನ್ನು ನಾನಿಲ್ಲಿ ಕಾಣುತ್ತಿದ್ದೇನೆ. ಈ ನಗರದ ಬೆಳವಣಿಗೆಗೆ ನನ್ನದೊಂದು ಕೊಡುಗೆ ಇರಲೇಬೇಕೆಂಬ ಆಸೆ ಚಿಗುರೊಡೆಯುತ್ತದೆ. ಹರಿ ರಚಿಸಿರುವ, `ರೂಮರ್ ಬುಕ್ಸ್ ಇಂಡಿಯಾ' ಪ್ರಕಾಶನದ `ದಿ ಪಿಲ್ಲರ್ ಇನ್ವಿಸಿಬಲ್' ಕೃತಿಯು ಇಂಥ ಸಾಧ್ಯತೆಗಳನ್ನು ಹುಟ್ಟುಹಾಕಿದೆ ಎಂದು ಶ್ಲಾಘಿಸಿದರು.

ಉದ್ಯಮಿ ಟಿ.ವಿ. ಮೋಹನ್‍ದಾಸ್ ಪೈ, ನಿವೃತ್ತ ಐಎಎಸ್ ಅಧಿಕಾರಿ ಎ. ರವೀಂದ್ರ,  ನಾಯರ್, ರೇವತಿ ಅಶೋಕ್, ಕೃತಿಯ ಕರ್ತೃ ಹರಿ ಪರಮೇಶ್ವರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT