ಜಿಲ್ಲಾ ಸುದ್ದಿ

ದಾಖಲಾತಿಯಲ್ಲಿ ತಾಯಿ ಹೆಸರು

Sumana Upadhyaya

ಬೆಂಗಳೂರು:ಮಕ್ಕಳ ತಾಯಂದಿರೂ ಸಹ ನೈಜ ಪೋಷಕರಾಗಿರುವುದರಿಂದ ಶಾಲೆಯ ಎಲ್ಲಾ ಹಂತಗಳಲ್ಲಿ ಮಕ್ಕಳ ದಾಖಲಾತಿ ಮಾಡಿಕೊಳ್ಳುವಾಗ ತಂದೆಯ ಹೆಸರಿನೊಂದಿಗೆ ತಾಯಿಯ ಹೆಸರೂ ಕೂಡ ದಾಖಲಾಗುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.

ಶಿಕ್ಷಣ ಇಲಾಖೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದು, ವಿವಿಧ ಹಂತಗಳ ಮಕ್ಕಳ ದಾಖಲಾತಿ ವೇಳೆ ತಾಯಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸುವ ಸಬಂಧ ನಿರ್ಧಾರ ತೆಗೆದುಕೊಂಡಿದೆ. ವಿಧಾನಸಭೆ ಅರ್ಜಿ ಸಮಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ನಡೆದ ಇಲಾಖೆ ಸಭೆಯಲ್ಲಿ ತಿದ್ದುಪಡಿ ಪ್ರಕರಣಗಳ ಇತ್ಯರ್ಥಕ್ಕೆ ಪರಿಷ್ಕೃತ ಸುತ್ತೋಲೆ ಹೊರಡಿಸಲು ಸೂಚಿಸಲಾಗಿತ್ತು. ಅದರಂತೆ ದಾಖಲಾತಿಗಳಲ್ಲಿ ವಿದ್ಯಾರ್ಥಿ ಹೆಸರು,ಪೋಷಕರ ಹೆಸರು, ಜಾತಿ ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿ ಮಾಡುವ ಸಂಬಂಧ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಒಂದಷ್ಟು ಮಾರ್ಪಾಡು ಮಾಡಲಾಗಿದೆ.

ಮಕ್ಕಳ ದಾಖಲಾತಿ ಮಾಡಿಕೊಳ್ಳುವಾಗ ಹಾಗೂ 7ನೇ ತರಗತಿ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ತಂದೆಯ ಹೆಸರಿನ ಜೊತೆ ತಾಯಿಯ ಹೆಸರನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ದತ್ತು ಪ್ರಕರಣಗಳಲ್ಲಿ ನ್ಯಾಯಾಲಯದ ಡಿಕ್ರಿ ಪಡೆದು ನೋಂದಣಿ ದಾಖಲಾತಿಗಳನ್ನು ಒದಗಿಸಿದಾಗ ಮಾತ್ರ ದತ್ತು ತಂದೆ,ತಾಯಿ ಹೆಸರನ್ನು ಅಂಕಪಟ್ಟಿಗಳಲ್ಲಿ ನಮೂದಿಸಲು ಶಿಕ್ಷಣಾಧಿಕಾರಿಗಳ ಹಂತದಲ್ಲಿಯೇ ಪರಿಶೀಲಿಸಿ ತಿದ್ದುಪಡಿಗೆ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಿದೆ.

SCROLL FOR NEXT