ರಾಜ್ಯೋತ್ಸವ ಆಚರಣೆ (ಕೃಪೆ: ಕೆಪಿಎನ್ )
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆಯನ್ನು ಒಂದು ವಾರಕ್ಕೆ ಸೀಮಿತಗೊಳಿಸಿ ನೀಡಿದ್ದ ನಿರ್ದೇಶನವನ್ನು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಖ್ ಹಿಂಪಡೆದಿದ್ದಾರೆ. ಎಂದಿನಂತೆ ಈ ಬಾರಿಯೂ ತಿಂಗಳು ಪೂರ್ತಿ ಉತ್ಸವ ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ ಎಂದು ಹೇಳಿ ದ್ದಾರೆ. ರಾಜ್ಯೋತ್ಸವದ ಹಿನ್ನೆಲೆ ಯಲ್ಲಿ ರಸ್ತೆಗಳಲ್ಲಿ ಪೆಂಡಾಲ್ ಗಳ ನ್ನು ಹಾಕುವುದರಿಮದ ಸಂಚಾರಕ್ಕೆ ಆಡಚಣೆಯಾಗಿ ಜನ ಸಂಕಷ್ಟ ಅನುಭವಿಸುವು ದನ್ನು ತಪ್ಪಿಸುವ ಉದ್ದೇಶದಿಂದ ಆಚರಣೆಗೆ ವಾರದ ಮಿತಿ ಹಾಕಿ ನಿರ್ಧಾರ ಕೈಗೊಳ್ಳಲಾಗಿತ್ತು.
ಅಲ್ಲದೇ, 7 ದಿನಕ್ಕೂ ಹೆಚ್ಚಿನ ದಿನ ಆಚರಿಸುವಂತಿದ್ದರೆ, ಸಾರ್ವಜನಿಕ ಮೈದಾನಗಳಲ್ಲಿ ಆಯೋಜಿಸಬಹುದು ಎಂದು ಹೇಳಲಾಗಿತ್ತು. ಆದರೆ, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದರು. ಉತ್ಸವ ಸೀಮಿತಗೊಳಿಸುವ ಹಿಂದೆ ಇಲಾಖೆಗೆ ಬೇರೆ ಉದ್ದೇಶವಿರಲಿಲ್ಲ.ಸ್ಥಳೀಯ ಪೊಲೀಸರಿಂದ ಅನುಮತಿ ಪಡೆದು ರಾಜ್ಯೋತ್ಸವ ಆಚರಿಸಲು ಇಲಾಖೆಯ ಸಹಮತವಿ ದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.