ಪೇಜಾವರ ಶ್ರೀ, ಮುಖ್ಯಮಂತ್ರಿ ಸಿದ್ಧರಾಮಯ್ಯ 
ಜಿಲ್ಲಾ ಸುದ್ದಿ

ಬಹುಸಂಖ್ಯಾತರ ಮನ ನೋಯಿಸೋದು ಬೇಡ: ಪೇಜಾವರ ಶ್ರೀ

``ಹಿಂದೂಗಳು ಮಸೀದಿ ಮುಂದೆ ಹೋಗಿ ಹಂದಿ ಮಾಂಸ ಸಮಾರಾಧನೆ ಮಾಡ್ತೀವಿ ಅಂದ್ರೆ ಒಪ್ತೀರಾ?'' ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ...

ಧುತ್ತರಗಾಂವ್ (ಕಲಬುರಗಿ ಜಿಲ್ಲೆ):``ಹಿಂದೂಗಳು ಮಸೀದಿ ಮುಂದೆ ಹೋಗಿ ಹಂದಿ ಮಾಂಸ ಸಮಾರಾಧನೆ ಮಾಡ್ತೀವಿ ಅಂದ್ರೆ ಒಪ್ತೀರಾ?'' ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ್ದಾರೆ.
 ಗೋಮಾಂಸ ಭಕ್ಷಣೆ ಕುರಿತ ಮುಖ್ಯಮಂತ್ರಿಗಳ ಹೇಳಿಕೆ ಬೇಸರ ತರಿಸಿದೆ. ಇಂತಹ ಹೇಳಿಕೆಗಳಿಂದ ಏನೂ ಸಾಧಿಸಲಾಗದು. ಬದಲಾಗಿ ವಿನಾಕಾರಣ ಚರ್ಚೆಗೆ ಯಾಕೆ ವೇದಿಕೆ ಹುಟ್ಟುಹಾಕಬೇಕು ಎಂದು ಪ್ರಶ್ನಿಸಿದರು.

ನಾಡಿನ ಮುಖ್ಯಮಂತ್ರಿಯಾದವರು ಹಿಂದೂಗಳ ಮನ ನೋಯುವಂತೆ ಹೇಳಿಕೆ ನೀಡುವುದು ಅವರಿಗಿರುವ ಹುದ್ದೆಗೆ ಶೋಭೆ ತರುವಂಥದ್ದಲ್ಲ. ಗೋಮಾಂಸ ಭಕ್ಷಣೆ ಬೇಡ.ಮದ್ಯಪಾನ, ದುವ್ರ್ಯಸನಗಳನ್ನು ಮಾಡಬೇಡಿ ಎಂದು ಹೇಳುವುದು ಮಠಾಧೀಶರ ಕರ್ತವ್ಯ. ಸಿಎಂ ಆಗಿದ್ದೂ ಹಿಂದೂಗಳ ಮನ ನೋಯಿಸುವಂತಹ ಹೇಳಿಕೆ ನೀಡಿರುವುದರಿಂದ ಸಿದ್ದರಾಮಯ್ಯನವರ ಬಗ್ಗೆ ನನಗಂತೂ ಬೇಸರವಾಗಿ ದೆ. ಗೋಮಾಂಸ ಭಕ್ಷಣೆ ವಿಚಾರ ಅವರವರ ಇಷ್ಟಕ್ಕೆ ಬಿಟ್ಟದ್ದು. ಉಪದೇಶ ನೀಡುತ್ತೇವೆ, ಸ್ವೀಕಾರ ಮಾಡುವುದು,ಬಿಡುವುದು ಅವರವರಿಗೆ ಬಿಟ್ಟ ಸಂಗತಿ ಎಂದರು.

ಚರ್ಚೆಗೆ ಬಾರದ ಭಗವಾನ್: ಕೃಷ್ಣ- ರಾಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಸಾಹಿತಿ ಭಗವಾನ್ ಅವರಿಗೆ ಸಾಕಷ್ಟು ಬಾರಿ ಉತ್ತರಿಸಿಯಾಗಿದೆ. ಅವರು ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಬಹಿರಂಗ ಚರ್ಚೆ ಮಾಡೋಣ ಎಂದು ಆಹ್ವಾನಿಸಿದರೂ ಬರುತ್ತಿಲ್ಲ ಎಂದರು.ಹಿಂದೂಗಳ ನಂಬಿಕೆಗಳ ಬಗ್ಗೆ ಹಾಗೂ ಕೃಷ್ಣ-ರಾಮರ ಬಗ್ಗೆ ಸಲ್ಲದ ಹೇಳಿಕೆ ನೀಡುವ ಸಾಹಿತಿಗಳು- ಬುದ್ಧಿ ಜೀವಿಗಳ ಹಾಗೂ ಗೋಮಾಂಸ ಭಕ್ಷಣೆ ವಿಚಾರದಲ್ಲಿನ ಸಲ್ಲದ ಹೇಳಿಕೆಗಳು ಪದೇ ಪದೇ ಪ್ರತಿಧ್ವನಿತವಾಗುತ್ತಿರುವುದರಿಂದ ಹಿಂದೂಗಳಲ್ಲಿ ಜಾಗೃತಿ ಮೂಡುತ್ತಿದೆ ಎಂದರು.

ರಾಜ್ಯಪಾಲರಿಗೆ ದೂರು: ಗೋಮಾಂಸ ಹೇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವ ಜೊತೆಗೆ, ಕಾನೂನು ಹೋರಾಟ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೈಸೂರಿನಲ್ಲಿ ಹೇಳಿದರು.

ಗೋಮಾಂಸ ಭಕ್ಷಣೆ ಕುರಿತಂತೆ ಸಂವಿಧಾನ ವಿರೋಧಿಯಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ 5ನೇ ತರಗತಿಗೆ ಸೇರಿದ್ದರಿಂದ ಪುಣ್ಯಕೋಟಿ ಕಥೆ ಓದಿಲ್ಲ. ಗೋಮಾಂಸ ಭಕ್ಷಣೆ ಕುರಿತು ಅವರು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.ಗೋಮಾಂಸ ಭಕ್ಷಣೆ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರ ಪತ್ನಿಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ತಿನ್ನೋದು ಗೊತ್ತಿರಲಿಲ್ಲ
ಕಾರ್ಕಳ: `ಕುರುಬರು ಕುರಿ ತಿನ್ನುತ್ತಾರೆ ಎಂದು ಕೇಳಿದ್ದೇವೆ. ಆದರೆ, ಗೋಮಾಂಸ ತಿನ್ನುತ್ತಾರೆ ಎಂಬುವುದು ನನಗೆ ತಿಳಿದಿರಲಿಲ್ಲ' ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಅವರು ಬಿಜೆಪಿ ವತಿಯಿಂದ ಬಸ್ ನಿಲ್ದಾಣದಲ್ಲಿ ಗೋ ಮಾಂಸದ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ಶನಿವಾರ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಒಬ್ಬ ಮುಖ್ಯಮಂತ್ರಿ ಗೋಮಾಂಸ ತಿನ್ನುತ್ತಾರೆ ಎಂದು ಹೇಳುವುದಾದರೆ ಕಸಾಯಿಖಾನೆಗೆ ಬೆಂಬಲ ನೀಡುತ್ತೇನೆ ಎನ್ನುವ ಅರ್ಥವಾಯಿತು. ಮುಂದಿನ ವಿಧಾನ ಸಭೆ ಅಧಿವೇಶನ ಈ ಹೇಳಿಕೆಯ ಮುಖಾಂತರ ಆರಂಭವಾಗುತ್ತದೆ ಎನ್ನುವುದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು. ಈ ಹೇಳಿಕೆಯನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT