ಮೃತ ಚಿಂಪಾಂಜಿ ಮಿರೆಲ್ಲಾ 
ಜಿಲ್ಲಾ ಸುದ್ದಿ

ಚಿಂಪಾಂಜಿ ಮಿರೆಲ್ಲಾ ಸಾವಿಗೆ ವಿಷಪ್ರಾಶನ ಕಾರಣ

ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಜೂನ್ 2 ನೇ ತಾರೀಕಿನಂದು ಮೃತಪಟ್ಟ ಹೆಣ್ಣು ಚಿಂಪಾಂಜಿ ಮಿರೆಲ್ಲಾ ಸಾವಿಗೆ ವಿಷಪ್ರಾಶನ ಕಾರಣ...

ಮೈಸೂರು: ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಜೂನ್  2 ನೇ ತಾರೀಕಿನಂದು ಮೃತಪಟ್ಟ ಹೆಣ್ಣು ಚಿಂಪಾಂಜಿ ಮಿರೆಲ್ಲಾ ಸಾವಿಗೆ ವಿಷಪ್ರಾಶನ ಕಾರಣ ಎಂದು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಪ್ರಯೋಗಾಲಯ ವರದಿ ನೀಡಿದೆ

ಜುಲೈ 13 ರಂದು ಪ್ರಯೋಗಾಲಯದ ಪರೀಕ್ಷಾ ವರದಿ ಸಲ್ಲಿಕೆ ಮಾಡಲಾಗಿದೆ. ಮಾನವರು ಆತ್ಮಹತ್ಯೆಗೆ ಬಳಸುವಂಥ ರಾಸಾಯನಿಕದ ಅಂಶ ಚಿಂಪಾಂಜಿಯ ಹೊಟ್ಟೆಯಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಆರಾಮವಾಗಿ ಓಡಾಡಿಕೊಂಡಿದ್ದ ಮಿರೆಲ್ಲಾ ಜೂನ್ 29 ರಂದು ಇದ್ದಕ್ಕಿದ್ದಂತೆ ಸಾವಿಗೀಡಾಗಿತ್ತು. ಮೃಗಾಲಯದ ಅಧಿಕಾರಿಗಳು ಚಿಂಪಾಂಜಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಿಕೆ ನೀಡಿದ್ದರು.

ಖಾಸಗಿ ಪ್ರಯೋಗಾಲಯದ ವರದಿಯಲ್ಲೂ ಚಿಂಪಾಂಜಿ ವಿಶಪ್ರಾಶನದಿಂದಲೇ ಸಾವನ್ನಪ್ಪಿದೆ ಎಂದು ಹೇಳಲಾಗಿತ್ತು. ಸಿಬ್ಬಂದಿಯನ್ನು ಸಹ ತನಿಖೆಗೆ ಒಳಪಡಿಸಲಾಗಿದ್ದು ಹೇಗೆ ಸಾವು ಸಂಭವಿಸಿದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಹಿಂದೆ ಸಹ  ಸಿಂಹವೊಂದಕ್ಕೆ ವಿಶಪ್ರಾಶನ ಮಾಡಿದ ಪ್ರಕರಣ ಮೈಸೂರು ಮೃಗಾಲಯದಲ್ಲಿ ನಡೆದಿತ್ತು. ಮೃಗಾಲಯಗಳ ಪ್ರಾಣಿ ವಿನಿನಿಮಯ ಯೋಜನೆಯಡಿ ಸ್ವೀಡನ್ ನ ಕೋಲ್ ಮಾರ್ಡೆನ್ ವನ್ಯಜೀವಿ ಧಾಮಕ್ಕೆ 1994 ರಲ್ಲಿ ಭಾರತದ ಒಂದು ಆನೆಯನ್ನು ಕೊಟ್ಟು 5 ಚಿಂಪಾಂಜಿಗಳನ್ನು ತರಲಾಗಿತ್ತು. ಈ ಪೈಕಿ 2 ಚಿಂಪಾಂಜಿಗಳು ಮಾತ್ರ ಬದುಕುಳಿದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!