ಬಿ.ಜೆ. ಪುಟ್ಟಸ್ವಾಮಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ವ್ಯವಹಾರದ ಉದ್ದೇಶವಿಲ್ಲ ಜನಾಂಗದ ಅಭಿವೃದ್ಧಿ ಮಾತ್ರ; ಬಿ.ಜೆ.ಪುಟ್ಟಸ್ವಾಮಿ

ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ಗೆ ಭೂ ಮಂಜೂರಾತಿ ಬಗ್ಗೆ ಲೋಕಾಯುಕ್ತ ಎಸ್.ಪಿ. ಸೋನಿಯಾ ನಾರಂಗ್ ಅವರಿಗೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿರುವ ದೂರಿನ ಬಗ್ಗೆ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಬಿ.ಜೆ. ಪುಟ್ಟಸ್ವಾಮಿ...

ಬೆಂಗಳೂರು: ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ಗೆ ಭೂ ಮಂಜೂರಾತಿ ಬಗ್ಗೆ ಲೋಕಾಯುಕ್ತ ಎಸ್.ಪಿ. ಸೋನಿಯಾ ನಾರಂಗ್ ಅವರಿಗೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.
ಅತ್ರಿ ಸಲ್ಲಿಸಿರುವ ದೂರಿನ ಬಗ್ಗೆ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಬಿ.ಜೆ. ಪುಟ್ಟಸ್ವಾಮಿ ಅವರು ಸ್ಪಷ್ಟನೆ ನೀಡಿದ್ದು, ಭೂ ಮಂಜೂರಾತಿ ವೇಳೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದಿದ್ದಾರೆ.

ಈ ಬಗ್ಗೆ ಲೋಕಾಯುಕ್ತ ಎಸ್.ಪಿ. ಸೋನಿಯಾ ನಾರಂಗ್ ಅವರಿಗೂ ಆಗಸ್ಟ್ 31, 2015ರಂದು ಮನವಿ ಸಲ್ಲಿಸಿದ್ದಾರೆ. ಈ ರಾಜಕೀಯ ಅಧಿಕಾರವನ್ನ ಎಂದಿಗೂ ಸ್ವಾರ್ಥಕ್ಕೆ ಉಪಯೋಗ ಮಾಡಿಕೊಂಡಿಲ್ಲ. ಶೋಷಣೆಗೆ ಒಳಪಟ್ಟ ಜನಾಂಗದ ಬಡವರ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿಯುತ್ತಿದ್ದು, ಕಳಂಕರಹಿತ ಜೀವನ ನಡೆಸಿದ್ದೇನೆ. ಆದಿಚುಂಚನಗಿರಿ ಟ್ರಸ್ಟ್ ಗೆ ಭೂ ಮಂಜೂರು ಮಾಡಿರುವ ಕಾನೂನಿನ ರೀತಿಯಲ್ಲೇ ವಿಶ್ವ ಗಾಣಿಗ ಸಮುದಾಯ ಟ್ರಸ್ಟïಗೂ ಭೂ ಮಂಜೂರಾತಿ ಆಗಿದೆ. ಎಲ್ಲಿಯೂ ಕಾನೂನುಬಾಹಿರ ಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸೋನಿಯಾ ನಾರಂಗ್ ಅವರಿಗೆ ನೀಡಿರುವ ಮನವಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಮಾಜಿ ಸಿ. ಎಂ. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಮತ್ತು ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಹೆಸರು ತಂದಿರುವುದು ಸರಿಯಲ್ಲ. ಇವರು ಮಾಡಿರುವ ಆರೋಪ ಆಧಾರರಹಿತವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಫೆಬ್ರುವರಿ 11, 2011ರಲ್ಲಿ ನಡೆದ ಜನಾಂಗದ ಸಮ್ಮೇಳನದಲ್ಲಿ ಭೂ ಮಂಜೂರಾತಿ ಬಗ್ಗೆ ಮನವಿ
ಮಾಡಿದ್ದು, ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ನ ಎಲ್ಲಾ  ಒಳ ಪಂಗಡಗಳ ಪ್ರಾತಿನಿಧ್ಯದೊಡನೆ ನೊಂದಾಯಿಸಲಾಗಿದೆ. ಇದರನ್ವಯ ಮಾರ್ಚ್ 28, 2011ರಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಎಂದು ಎಸ್.ಪಿ. ನಾರಂಗ್ ಅವರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!