ಬೆಂಗಳೂರು: ಬಿಬಿಎಂಪಿ ವಿಭಜನೆ ಮಾಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಕಾಂಗ್ರೆಸ್‍ನ ಮಾಜಿ ಮೇಯರ್‍ಗಳು ಹೇಳಿದ್ದಾರೆ.
ಕಾಂಗ್ರೆಸ್‍ನ ಮಾಜಿ ಮೇಯರ್‍ಗಳಿದ್ದ ಮಾಜಿ ಸಚಿವ ಬಿ.ಎಲ್.ಶಂಕರ್ ನೇತೃತ್ವದ ಸಮಿತಿಯಲ್ಲಿ ಈ ಹಿಂದೆ ಬಿಬಿಎಂಪಿ ವಿಭಜನೆ ಬಗ್ಗೆ ಸವಿವರ ಅಧ್ಯಯನ ವರದಿ ಸಲ್ಲಿಸಿತ್ತು. ಅದೇ ಸಮಿತಿಯಲ್ಲಿದ್ದ ಮಾಜಿ ಮೇಯರ್ ಗಳಾದ ಪಿ.ಆರ್.ರಮೇಶ್, ಹುಚ್ಚಪ್ಪ, ಎಂ. ರಾಮಚಂದ್ರಪ್ಪ ಈಗ ಬಿಬಿಎಂಪಿ ಸುಧಾರಣೆ ಮಾಡುವಂತೆ ಹೇಳಿದ್ದಾರೆ. ಅಂದರೆ ಬಿಬಿಎಂಪಿಯನ್ನು ಪುನಾರಚನೆ ಮಾಡುವುದಕ್ಕಿಂತ ಪುನರ್ ಸುಧಾರಣೆ ಮಾಡಬೇಕು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ರಾಮಚಂದ್ರಪ್ಪ ಅವರು ಮಾತನಾಡಿ, ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಿದವರನ್ನು ಸರ್ಕಾರ ರಚಿಸಲು ರಾಜ್ಯಪಾಲರು ಅಥವಾ ರಾಷ್ಟ್ರಪತಿ ಆಹ್ವಾನ ನೀಡುತ್ತಾರೆ. ಆದರೆ ಬಿಬಿಎಂಪಿಯಲ್ಲಿ ಅವಕಾಶ ಇಲ್ಲ. ನಿಗದಿಯಾದ ದಿನಾಂಕದಂದು ಮೇಯರ್ ಸ್ಥಾನಕ್ಕೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಾರೆ. ಯಾರಿಗೆ ಹೆಚ್ಚು ಸದಸ್ಯರ ಬೆಂಬಲ ಇರುತ್ತದೋ ಅವರು ಆಯ್ಕೆಯಾಗುತ್ತಾರೆ. ಬಿಜೆಪಿಯವರು ಹೇಡಿಗಳಂತೆ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಅರ್ಥಹೀನ ಎಂದರು.