ಜಿಲ್ಲಾ ಸುದ್ದಿ

ರು.30 ಲಕ್ಷದ ಚಿನ್ನಾಭರಣ ನಾಪತ್ತೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್) ಕೇರಳದ ಕೊಚ್ಚಿಗೆ ತೆರಳುತ್ತಿದ್ದ ಮಹಿಳೆಯೊಬ್ಬರ ರು.30 ಲಕ್ಷ ಮೌಲ್ಯದ ಚಿಭರಣಗಳು ಕಾಣೆಯಾಗಿವೆ.

ಫ್ರೇಜರ್‍ಟೌನ್ ನಿವಾಸಿಯಾಗಿರುವ ನಿರ್ಮಲಾ ಜೇಮ್ಸ್ ಅವರು ಆ.28ರಂದು ಕೆಐಎಎಲ್ ಮೂಲಕ ಕೊಚ್ಚಿಗೆ ತೆರಳಿದ್ದಾರೆ. ಕೊಚ್ಚಿಗೆ ಹೋದ ನಂತರ ತಮ್ಮ ಬ್ಯಾಗ್‍ನಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಎಲ್ಲೆಡೆ ಹುಡುಕಾಡಿದರೂ ಕಾಣಿಸಿಲ್ಲ. ಅಲ್ಲದೇ ಕೊಚ್ಚಿ ಏರ್‍ಪೋರ್ಟ್‍ನ ಅಧಿಕಾರಿಗಳ ಸಹಾಯವನ್ನು ಕೋರಿದ್ದರೂ ಚಿನ್ನಾಭರಣ ಪತ್ತೆಯಾಗಲಿಲ್ಲ.

ಹೀಗಾಗಿ, ಫ್ರೇಜರ್‍ಟೌನ್‍ನ ತನ್ನ ಮನೆಯಲ್ಲೇ ಬಿಟ್ಟು ಬಂದಿರಬಹುದು ಎಂದು ಭಾವಿಸಿ ಮಗಳು ಮೇಘಾ ಜೇಮ್ಸ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಹೀಗಾಗಿ, ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಚಿನ್ನಾಭರಣ ಕಾಣಿಸಿಲ್ಲ. ಅಂತಿಮವಾಗಿ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಏರ್‍ಪೋರ್ಟ್‍ಗೆ ತರಲಾಗಿತ್ತು.

ಅಲ್ಲಿಂದಲೇ ಬ್ಯಾಗ್ ಕಾಣೆಯಾಗಿದೆ ಎಂಬುದನ್ನು ನಿರ್ಮಲಾ ಅವರು ಮನವರಿಕೆ ಮಾಡಿಕೊಂಡಿದ್ದಾರೆ. ಬಳಿಕ ಮಗಳಿಗೆ ಕರೆ ಮಾಡಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದರು. ಅದರಂತೆ ಮಗಳು ಮೇಘಾ ಜೆಮ್ಸ್ ಅವರು ಶನಿವಾರ (ಸೆ.5) ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಿರ್ಮಲಾ ಅವರು ಆಭರಣಗಳನ್ನು ಏರ್ ಪೋರ್ಟ್‍ನಲ್ಲಿಟ್ಟು ಮರೆತು ಹೋಗಿದ್ದರಾ ಅಥವಾ ಕಳವಾಗಿದೆಯಾ? ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT