ಜಿಲ್ಲಾ ಸುದ್ದಿ

ಕೆಎಸ್ ಆರ್ ಟಿಸಿ ತರಬೇತಿ ನೌಕರರಿಗೆ ಭತ್ಯೆ ಹೆಚ್ಚಳ

Shilpa D

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತರಬೇತಿ  ನೌಕರರಿಗೆ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ, ನಿಗಮದಲ್ಲಿ  ಕೆಲಸ ಮಾಡುವ ತರಬೇತಿ ನೌಕರರ ಮಾಸಿಕ ಸಂಬಳ ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ. ಈ ಆದೇಶ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

ಇದೇ ಮೊದಲ ಬಾರಿಗೆ ಶೇ. 30 ರಷ್ಟು ಭತ್ಯೆ ಹೆಚ್ಚಳ ಮಾಡಲಾಗಿದ್ದು ರಾಜ್ಯದ ನಾಲ್ಕೂ ನಿಗಮಗಳ 17 ಸಾವಿರ ಸಿಬ್ಬಂದಿಗೆ ಈ ಸೌಲಭ್ಯ ದೊರಕಲಿದೆ.  ಇದರಿಂದ ನಿಗಮಕ್ಕೆ ವಾರ್ಷಿಕ ರೂ. 60 ಕೋಟಿ ಹೆಚ್ಚುವರಿ ಹೊರೆಯಾಗಲಿದೆ.

ಯಾರಿಗೆ ಎಷ್ಟು ಹೆಚ್ಚಳ
ಸಂಚಾರ ನೀರಿಕ್ಷಕ, ಪಾರುಪತ್ತೆಗಾರ, ಸಿಬ್ಬಂದಿ, ಮೇಲ್ವಿಚಾರಕ,  ಅಂಕಿ ಅಂಶ ಪರೀಕ್ಷಕ. ಉಗ್ರಾಣ ರಕ್ಷಕ, ಕಿರಿಯ ಅಭಿಯಂತರ, ವಿಭಾಗೀಯ ಭದ್ರತಾ  ನಿರೀಕ್ಷಕರಿಗೆ ಸದ್ಯರೂ. 7 800ರಿಂದ 10.150.

ಸಹಾಯಕ ಉಗ್ರಾಣ ರಕ್ಷಕ ಸಹಾಯಕ ಲೆಕ್ಕಿಗ, ಕಿರಿಯ ಶೀಘ್ರ ಲಿಪಿಕಾರ, ಸ್ಟಾಫ್ ನರ್ಸ್ ಮತ್ತು ತತ್ಸಮಾನ ಹುದ್ದೆ ಸಿಬ್ಬಂದಿಗೆ ರೂ. 7.500 ರಿಂದ 9. 750

ಚಾಲಕರಿಗೆ ರೂ. 7.500ರಿಂದ 10 ಸಾವಿರಕ್ಕೆ, ನಿರ್ವಾಹಕ, ಚಾಲಕ ಕಮ್  ನಿರ್ವಾಹಕರಿಗೆ ರೂ. 7 ಸಾವಿರದಿಂದ ರೂ. 9.100

ದಿನ ನಿತ್ಯ ಬಳಕೆ ವಸ್ತುಗಳ ದರ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ತರಬೇತಿ ನೌಕಕರರಿಗೆ ಸಂಬಳ ಕಡಿಮೆ ಇದ್ದು ಜೀವನ ಸಾಗಿಸುವುದು ಕಷ್ಟ. ಇದನ್ನು ಅರಿತ ನಿಗಮ ಇದೇ ಮೊದಲ ಬಾರಿಗೆ ಶೇ. 30 ರಷ್ಟು ಸಂಬಳ ಹೆಚ್ಚಿಸಿದೆ.

ರಾಜೇಂದ್ರ ಕುಮಾರ್ ಕಠಾರಿಯಾ
ಎಂ.ಡಿ. ಕೆಎಸ್ ಆರ್ ಟಿಸಿ


SCROLL FOR NEXT