ಎಂ.ಜಿ. ಗೋಕುಲ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಕೊಲೆ ಮಾಡಿ ಉಸಿರು ನಿಲ್ಲುವವರೆಗೆ ಕಾಯ್ದಿದ್ದ ಕ್ರೂರಿ ಹಂತಕ

ಏರ್ ಪೋರ್ಟ್ ಗೆ ಹುಸಿಕರೆ ಮಾಡಿ, ಪತ್ನಿ ಕೊಲೆ ಪ್ರಕರಣದಲ್ಲೂ ಬಂಧಿತನಾಗಿರುವ ಕೇರಳ ಮೂಲದ ಎಂಬಿಎ ಪದವಿಧರ ಗೋಕುಲ್, ಪತ್ನಿ ಅನುರಾಧ ತಲೆಗೆ ಗಣೇಶ ವಿಗ್ರಹದಿಂದ ಹಲ್ಲೆ ಮಾಡಿದ ನಂತರ ಬರೋಬ್ಬರಿ 2 ತಾಸುಗಳ ಕಾಲ ಉಸಿರು...

ಬೆಂಗಳೂರು: ಏರ್ ಪೋರ್ಟ್ ಗೆ ಹುಸಿಕರೆ ಮಾಡಿ, ಪತ್ನಿ ಕೊಲೆ ಪ್ರಕರಣದಲ್ಲೂ ಬಂಧಿತನಾಗಿರುವ ಕೇರಳ ಮೂಲದ ಎಂಬಿಎ ಪದವಿಧರ ಗೋಕುಲ್, ಪತ್ನಿ ಅನುರಾಧ ತಲೆಗೆ ಗಣೇಶ ವಿಗ್ರಹದಿಂದ ಹಲ್ಲೆ ಮಾಡಿದ ನಂತರ ಬರೋಬ್ಬರಿ 2 ತಾಸುಗಳ ಕಾಲ ಉಸಿರು ನಿಲ್ಲುವವರೆಗೂ ಕಾದು ಕುಳಿತಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜು.28ರ ರಾತ್ರಿ ಪತ್ನಿಗೆ ಮದ್ಯ ಕುಡಿಸಿ ಜಗಳ ಮಾಡಿದ ಗೋಕುಲ್, ಆಕೆಯ ತಲೆಗೆ ಬಲವಾಗಿ ಹೊಡೆದಿದ್ದ. ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗುತ್ತಿದ್ದ ಪತ್ನಿ ಅನುರಾಧ ಬಳಿಯೇ ಉಸಿರು ನಿಲ್ಲುವವರೆಗೂ ಕಾಯ್ದು ಕುಳಿತಿದ್ದ. ತಲೆಗೆ ಹಲ್ಲೆ ಮಾಡಿದ್ದರಿಂದ ಕೆಲ ಹೊತ್ತಿನಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರೆ ಅನುರಾಧ ಬದುಕುಳಿಯುತ್ತಿದ್ದಳು. ಹಾಗೆ ಮಾಡದೆ ಉಸಿರು ನಿಲ್ಲುವವರೆಗೂ ನೋಡುತ್ತ ನಿಂತಿದ್ದ. ನಸುಕಿನ ನಾಲ್ಕು ಗಂಟೆ ಸುಮಾರಿಗೆ ಪತ್ನಿ ಮೃತಪಟ್ಟಿದ್ದಾಳೆ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಪೊಲೀಸರು, ಕುಟುಂಬ ಸದಸ್ಯರಿಗೆ ಕರೆ ಮಾಡಿ ತಿಳಿಸಿದ್ದ.

ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ 2 ವರ್ಷದ ಮಗಳು ಮನೆಯಲ್ಲೇ ಇದ್ದಳು. ಆದರೆ, ಆಕೆಗೆ ತನ್ನ ತಾಯಿಯನ್ನು ತಂದೆಯೇ ಕೊಲೆಗೈದಿದ್ದಾನೆ ಎನ್ನುವ ಸಣ್ಣ ಅರಿವೂ ಇರಲಿಲ್ಲ. ಪತ್ನಿ ಕೊಲೆ ಗೈಯ್ಯಲು ಆರೋಪಿ ಬಳಸಿದ್ದ ಗಣೇಶ ವಿಗ್ರಹ ಪ್ರಮುಖ ಸಾಕ್ಷ್ಯವಾಗಲಿದೆ. ಹೀಗಾಗಿ, ಅದನ್ನು ಪತ್ತೆ ಮಾಡಬೇಕಿದೆ. ಅದನ್ನು ಆರೋಪಿ ಎಲ್ಲಿಟ್ಟಿದ್ದಾನೆ ಎನ್ನುವುದನ್ನೇ ಬಾಯ್ಬಿಡುತ್ತಿಲ್ಲ. ಹೀಗಾಗಿ, ಆತನನ್ನು ಮನೆಗೆ ಕರೆದೊಯ್ದು ಪರಿಶೀಲನೆ ಕಾರ್ಯ ನಡೆಸು ವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಮಾಡಿಕೊಡಲಾಯಿತು. ಆತ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಕೇಳಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪಾಲಕರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT