ಜಿಲ್ಲಾ ಸುದ್ದಿ

ಸಾಮಾಜಿಕ ನ್ಯಾಯದಿಂದ ಬಲಿಷ್ಠ ರಾಷ್ಟ್ರ: ರವಿಶಂಕರ್ ಗುರೂಜಿ

ಬೆಂಗಳೂರು: ತುಳಿತಕ್ಕೆ ಒಳಗಾದ, ದೀನದಲಿತ, ಶೋಷಿತ ಹಾಗೂ ಅನ್ಯಾಯಕ್ಕೆ ಒಳಗಾದ ಎಲ್ಲಾ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಮೂಲಕ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.

ಆರ್ಟ್ ಆಫ್ ಲಿವಿಂಗ್ ಅಂತಾ ರಾಷ್ಟ್ರೀಯ ಸಂಸ್ಥೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ನಾಯಕತ್ವ ತರಬೇತಿ
ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತಳ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಲು ಮೇಲ್ವರ್ಗದವರು ಸಹಕಾರ ನೀಡಬೇಕು. ಆಗ ಮಾತ್ರ ಮನುಷ್ಯಕುಲ
ಒಗ್ಗೂಡಿ ಶಾಂತಿ ನೆಲೆಸಲು ಸಹಕಾರ ವಾಗುತ್ತದೆ. ಶೋಷಿತ ಜನಾಂಗದವರು ಕೀಳರಿಮೆ ಬಿಟ್ಟು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಭಾರತ್ ಬಂಜಾರ ಸೇವಾಲಾಲ್ ಸೇನೆಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಜಿ. ಅಶ್ವಥ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಜಾರ ಜನಾಂಗವು ವಿಶೇಷ ಉಡುಗೆ, ತೊಡುಗೆ ಮೂಲಕ ಸಾಂಸ್ಕೃತಿಕ, ಸಾಹಿತ್ಯವನ್ನು ಉಳಿಸಿಕೊಂಡಿದೆ. ಈ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಸ್ಥಾನಮಾನ ನೀಡಬೇಕೆಂದು ಮನವಿ ಮಾಡಿದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್, ಸಂಸದ ಬಿ.ಎನ್. ಚಂದ್ರಪ್ಪ, ಸಿಎಂ ಆಪ್ತ ಕಾರ್ಯದರ್ಶಿ ಹೀರಾ ನಾಯ್ಕ್, ಐಎಎಸ್ ಅಧಿಕಾರಿ ಬಿ.ಪಿ. ಕನಿರಾಂ, ನಿಗಮದ ಎಂಡಿ ಭೋಜ್ಯನಾಯ್ಕ್, ಮಾಜಿ ಶಾಸಕ ಡಾ. ಎಂ.ಪಿ. ನಾಡಗೌಡ ಇದ್ದರು. ಇಂದು ಸಮಾರೋಪ: ಆರ್ಟ್ ಆಫ್ ಲಿವಿಂಗ್‍ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ನಾಯಕತ್ವ ತರಬೇತಿ
ಶಿಬಿರದ ಸಮಾರೋಪ ಸಮಾರಂಭವು ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

SCROLL FOR NEXT