ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಹೂಡಿಕೆ ಸಮಾವೇಶ ಫೆಬ್ರವರಿಗೆ

ವಿಶ್ವಬ್ಯಾಂಕ್ ಮಾನದಂಡಗಳನ್ನು ಆಧರಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿದ ಉದ್ಯಮಿ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ ದೊರಕಿರುವುದು...

ಬೆಂಗಳೂರು: ವಿಶ್ವಬ್ಯಾಂಕ್ ಮಾನದಂಡಗಳನ್ನು ಆಧರಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿದ ಉದ್ಯಮಿ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ ದೊರಕಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಕ್ಕೆ ಮುಖಭಂಗವನ್ನುಂಟು ಮಾಡಿದ್ದು, ನವೆಂಬರ್‍ನಲ್ಲಿ ನಡೆಯಬೇಕಿದ್ದ ಇನ್ವೆಸ್ಟರ್ ಮೀಟ್ -2015ನ್ನು ಫೆಬ್ರವರಿವರೆಗೆ ಮುಂದೂಡಲಾಗಿದೆ. ಆದರೆ, ರಾಜ್ಯವನ್ನು ಆವರಿಸಿರುವ ಭೀಕರ ಬರದ ಹಿನ್ನೆಲೆಯಲ್ಲಿ ಇನ್ವೆಸ್ಟರ್ ಮೀಟ್-2015ನ್ನು ಫೆಬ್ರವರಿ 3,4 ಹಾಗೂ 5ಕ್ಕೆ ಮುಂದೂಡಲಾಗಿದೆ. ರಾಜ್ಯದ 136 ತಾಲೂಕುಗಳು ಹಿಂದೆಂದೂ ಕಂಡರಿಯದ ಬರಕ್ಕೆ ತುತ್ತಾಗಿದ್ದು, ರು.15636 ಕೋಟಿ ನಷ್ಟವಾಗಿದೆ. ವಿದ್ಯುತ್ ಅಭಾವವೂ ಇದೆ. ಅಲ್ಲದೆ, ರೈತರು ನಮ್ಮದೇ ಕುಟುಂಬದ ಸದಸ್ಯರು. ಅವರು ಸಂಕಷ್ಟದಲ್ಲಿರುವಾಗ ಅದ್ಧೂರಿಯಾಗಿ ಇನ್ವೆಸ್ಟರ್ ಮೀಟ್ ನಡೆಸುವುದು ಭಾವನಾತ್ಮಕವಾಗಿ ಸಮಂಸಜವಲ್ಲ
ಎಂಬ ಕಾರಣಕ್ಕೆ ಮುಂದೂಡಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಂಗಳವಾರ ಈ ಸಂಬಂಧ ಚರ್ಚೆ ನಡೆಸಿದ್ದು, ಬರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೂಡಿಕೆದಾರರ ಸಮಾವೇಶ ಮುಂದೂಡುತ್ತೇವೆ. ಫೆಬ್ರವರಿ ಹೊತ್ತಿಗೆ ರಾಜ್ಯದಲ್ಲಿ ಬರ ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆ ಇದೆ. ಜತೆಗೆ 2300 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಜೂನ್ ತಿಂಗಳ ನಂತರ ರಾಜ್ಯಕ್ಕೆ ಲಭಿಸಲಿದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಇನ್ವೆಸ್ಟರ್ ಮೀಟ್ ನಡೆಸುವುದಕ್ಕೆ ಫೆಬ್ರವರಿ ಪ್ರಶಸ್ತ ಎಂದು ನಿರ್ಧರಿಸಲಾಗಿದೆ ಎಂದರು.

ಹೂಡಿಕೆ ಬಂದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ವರ್ಷ ಕಾಲ ಕೈಗಾರಿಕೆ ಇಲಾಖೆ ನಿಭಾಯಿಸಿ ದ್ದರು. ಹೀಗಾಗಿ ನಿರೀಕ್ಷಿತ ಲಕ್ಷ್ಯ ದೊರೆಯದ ಕಾರಣಕ್ಕೆ ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆಯಾಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಶ್ನೆಯಲ್ಲಿ ಹುರುಳಿಲ್ಲ. ಅವರ ಕಾಲಾವಧಿಯಲ್ಲಿ  ರು. 121187ಕೋಟಿ ಹೂಡಿಕೆಗೆ ಒಡಂಬಡಿಕೆಯಾಗಿದೆ. ರಾಜ್ಯದಿಂದ  ಯಾವುದೇ ಕೈಗಾರಿಕೆ ಹೊರಕ್ಕೆ ಹೋಗಿಲ್ಲ ಎಂದು ಹೇಳಿದರು.
ಸಿಎಸ್ ನೆರವು: ಕುತೂಹಲಕಾರಿ ಸಂಗತಿ ಎಂದರೆ ಇದೇ ಮೊದಲ ಬಾರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಸಚಿವರೊಬ್ಬರಿಗೆ ನೆರವು ನೀಡಲು ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ಕೇಂದ್ರದ ಈ ವರದಿಗೂ ಕೈಗಾರಿಕಾ ಹೂಡಿಕೆಗೂ ಯಾವುದೇ ಸಂಬಂಧವಿಲ್ಲ. ಉದ್ಯಮಿಗಳ ಜತೆಗೆನಮ್ಮದು ಸ್ಥಿರ ವೈವಾಹಿಕ ಸಂಬಂಧವೇ ವಿನಾ ಈಗಷ್ಟೇ ಆರಂಭವಾದ ಮಧುಚಂದ್ರವಲ್ಲ. ಹೀಗಾಗಿ ವರದಿ ಬಗ್ಗೆ ಆತಂಕ ಬೇಡ ಎಂದು ಅಭಿಪ್ರಾಯಪಟ್ಟರು.



ಪರಿಷ್ಕರಣೆ ಆಗ್ರಹ
ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ ಲಭಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, 2002ರಿಂದಲೇ ನಾವು ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡುವುದಕ್ಕೆ ಪ್ರಯತ್ನ ನಡೆಸಿದ್ದೇವೆ. ಆದರೂ ಕೇಂದ್ರ ಸರ್ಕಾರ ಈ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ವಿಪರ್ಯಾಸ. ವರದಿ ಬಗ್ಗೆ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳು ಆಕ್ರೋಶ ವ್ಯಕ್ತಪಡಿಸಿವೆ. ನಾನು ಆ ರೀತಿ ಮಾತನಾಡಲು ಬಯಸುವುದಿಲ್ಲ. ಆದರೆ, ಈ ವರದಿಯನ್ನು ಪುನರ್ ವಿಮರ್ಶೆಗೆ ಒಳಪಡಿಸಿ ಮರು ಪ್ರಕಟಿಸುವಂತೆ ನಾನು ಕೇಂದ್ರಕ್ಕೆ ಆಗ್ರಹಿಸು ತ್ತೇನೆ ಎಂದು ಹೇಳಿದರು. ನನಗೆ ಪೈಪೋಟಿಯಲ್ಲಿ ನಂಬಿಕೆ ಇದೆ. ಔದ್ಯಮಿಕ ಕ್ಷೇತ್ರದಲ್ಲಿ ಕರ್ನಾಟಕ ಇತರೆ ರಾಜ್ಯಗಳ ಜತೆ ಪೈಪೋಟಿ ನಡೆಸುವುದಕ್ಕೆ ಸಮರ್ಥವಾಗಿದೆ. ಕೇಂದ್ರ ಸರ್ಕಾರ ಪೂರ್ವಗ್ರಹವಿಲ್ಲ ದೇ ವರದಿ ತಯಾರಿಸಿದರೆ ಕರ್ನಾಟಕದ ಸ್ಥಾನ ಇನ್ನಷ್ಟು ಉತ್ತಮಗೊಳ್ಳುತ್ತದೆ ಎಂಬ ನಂಬಿಕೆ ನನಗಿದೆ. ಆದರೆ, ಈ ವರದಿಗೂ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮುಂದೂಡುವು ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT