ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಎಚ್‍ಎಸ್‍ಆರ್ ಲೇಔಟ್ ಇಂದು ಮುಕ್ತ ಮುಕ್ತ ಮುಕ್ತ: ಖಾಸಗಿ ವಾಹನ ಸಂಚಾರವಿಲ್ಲ

ನಗರದ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಇಂದು (ಸೆ.20) ಖಾಸಗಿ ವಾಹನ ನಿಷಿದ್ಧ. ಸಾರ್ವಜನಿಕರು ತಮ್ಮ ಯಾವುದೇ ಕೆಲಸಗಳಿದ್ದರೆ ಅದಕ್ಕೆ ಬಿಎಂಟಿಸಿ...

ಬೆಂಗಳೂರು: ನಗರದ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಇಂದು (ಸೆ.20) ಖಾಸಗಿ ವಾಹನ ನಿಷಿದ್ಧ. ಸಾರ್ವಜನಿಕರು ತಮ್ಮ ಯಾವುದೇ ಕೆಲಸಗಳಿದ್ದರೆ ಅದಕ್ಕೆ ಬಿಎಂಟಿಸಿ ಬಸ್‍ನ್ನೇ ಬಳಸಬೇಕು. ತುರ್ತು ಸೇವೆಗಳ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.

ಕಬ್ಬನ್ ಪಾರ್ಕ್ ಹೊರತುಪಡಿಸಿದರೆ, ಜನವಸತಿ ಪ್ರದೇಶದಲ್ಲಿ ಇದೇ ಮೊದಲು ಇಂತಹ ಕಾರ್ಯಕ್ರಮ ನಡೆಯುತ್ತಿದೆ. ವಾಹನಗಳ ಬಳಕೆ ಇಲ್ಲದ ಕಾರಣ ಅದೇ ಬಡಾವಣೆಯ ಯಾವ ಭಾಗಕ್ಕೆ ಸಂಚರಿಸಿದರೂ ಬಿಎಂಟಿಸಿ ಬಸ್ ದರ ರು.5 ಮಾತ್ರ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಬಿಎಂಟಿಸಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹೆಚ್‍ಎಸ್‍ಆರ್ ಬಡಾವಣೆಯಲ್ಲಿ ಓಪನ್ ಸ್ಟ್ರೀಟ್ಸ್-ಬೆಂಗಳೂರು ಎಂಬ ಅಪರೂಪದ ಕಾರ್ಯಕ್ರಮ ಆಯೋಜಿಸಿದೆ.

ಲೇಔಟ್‍ನ 4 ಜಾಗಳಲ್ಲಿ

  • 100 ಸೈಕಲ್‍ಗಳು ಬಾಡಿಗೆಗೆ. ಭಾವಚಿತ್ರವಿರುವ ಗುರುತಿನ ಚೀಟಿ ನೀಡಿ ಸೈಕಲ್ ಪಡೆಯಬಹುದು.
  • ಬಡಾವಣೆಯ ಒಳಗೆ ಹಾಗೂ ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ ಹಾಗೂ ಕೆ.ಆರ್. ಮಾರ್ಕೆಟ್ ನಿಲ್ದಾಣಗಳಿಗೆ ಹೆಚ್ಚುವರಿ ಸೇವೆ
  • ವಿಮಾನ ನಿಲ್ದಾಣಕ್ಕೆ ಸಂಚರಿಸಲು ಏರ್ ಪೋರ್ಟ್ ಬಸ್‍ಗಳ ಸೇವೆ ಬಳಸಿಕೊಳ್ಳಬಹುದು
  • ಹೆಚ್‍ಎಸ್‍ಆರ್ ಬಡಾವಣೆಯಲ್ಲಿ ಮಾರಾಟವಾಗುವ ದೈನಂದಿನ ಬಸ್ ಪಾಸುಗಳ ದರವನ್ನು ರು.70ರ ಬದಲಾಗಿ ರು.50ಕ್ಕೆ ನಿಗದಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT