ಅಗ್ನಿಶಾಮಕ ದಳದವರು ಮಗುವನ್ನು ರಕ್ಷಿಸುತ್ತಿರುವುದು 
ಜಿಲ್ಲಾ ಸುದ್ದಿ

ತಪ್ಪಿತು ಲಿಫ್ಟ್ ಆಪತ್ತು

ಮಹಾತ್ಮ ಗಾಂಧಿ ರಸ್ತೆ ಸೆಂಟ್ ಮಾರ್ಕ್ಸ್ ಕೆಥಡ್ರಲ್ ಚರ್ಚ್‍ನಲ್ಲಿ ಕೆಟ್ಟು ನಿಂತ ಲಿಫ್ಟ್ ನಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿ 9 ಮಂದಿಯನ್ನು ಅಗ್ನಿಶಾಮಕ ರಕ್ಷಣಾ ...

 ಬೆಂಗಳೂರು:  ಮಹಾತ್ಮ ಗಾಂಧಿ ರಸ್ತೆ ಸೆಂಟ್ ಮಾರ್ಕ್ಸ್ ಕೆಥಡ್ರಲ್ ಚರ್ಚ್‍ನಲ್ಲಿ ಕೆಟ್ಟು ನಿಂತ ಲಿಫ್ಟ್  ನಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿ 9 ಮಂದಿಯನ್ನು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಸುಮಾರು 2 ತಾಸಿಗೂ ಹೆಚ್ಚು ಕಾಲ ಜನರು ಸಿಲುಕಿದ್ದ ಕಾರಣ ಅವರಿಗೆ ಉಸಿರುಗಟ್ಟಿದ ಅನುಭವವಾಗಿತ್ತು. ಪರಿಸ್ಥಿತಿ ಕೈ ಮೀರುವ ಮೊದಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ 9 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದರು. ದೊಡ್ಡನೆಕ್ಕುಂದಿ 7ನೇ ಕ್ರಾಸ್‍ನ ರಾಮ್  (70), ಕ್ಯಾಥೆಡ್ರಿನ್ (32), ಮರ್ಲಿನ್ (35), ಪೀಟರ್ (45), ಗ್ಸೇವಿಯರ್ (40), ಅಬಿsಶೇಕ್ ಪಾಲ್ (13), ಶರಲಾ (3) ಹಾಗೂ ಇನ್ನಿಬ್ಬರನ್ನು ರಕ್ಷಿಸಲಾಗಿದೆ. 
ಸಿಕ್ಕಿಕೊಂಡ ಮದುವೆ ಅತಿಥಿಗಳು: ಚರ್ಚ್ ನ ಹಾಲ್‍ನಲ್ಲಿ ಶನಿವಾರ ನಡೆದ ಮದುವೆಗೆ ಬಂದಿದ್ದ 9 ಮಂದಿ ಲಿಫ್ಟ್ ನಲ್ಲಿ ಕೆಳಗೆ ಬರುತ್ತಿ ದ್ದರು. ಈ ವೇಳೆ ಲಿಫ್ಟ್  ಕೆಟ್ಟು ನಿಂತಿದೆ. ಹೀಗಾಗಿ, ಒಳಗಿದ್ದವರು ಕೂಗಾಡಲು ಆರಂಭಿಸಿ ದರು. ಸ್ಥಳಕ್ಕೆ ಬಂದ ಚರ್ಚ್ ನ ಸಿಬ್ಬಂದಿ ಲಿಫ್ಟ್ ಬಾಗಿಲು ತೆಗೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದರು. ರಾತ್ರಿ 9.55ಕ್ಕೆ ಚರ್ಚ್ ನಿಂದ ಕರೆ ಬಂದಿತ್ತು. 8.30ರ ಸುಮಾರಿಗೆ ಲಿಫ್ಟ್  ಸ್ಥಗಿತಗೊಂಡು ಜನರು ಸಿಲುಕಿದ್ದಾರೆ ಎಂದರು. ಹೀಗಾಗಿ ಆಮ್ಲಜನಕ ಸರಬರಾಜು ಮಾಡುವಉಪಕರಣಗಳೊಂದಿಗೆ ಸ್ಥಳಕ್ಕೆ ತೆರಳಿದೆವು ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದರು.
ಗೋಡೆಗೆ ಕನ್ನ: ಲಿಫ್ಟ್  ಕಾರ್ ಎರಡನೇ ಮಹಡಿ ಹಾಗೂ ನೆಲಮಹಡಿ ನಡುವೆ ನಿಂತಿತ್ತು. ಅದನ್ನು ಕೆಳಗೆ ತರುವ ಪ್ರಯತ್ನ ವಿಫಲವಾದ ಬಳಿಕ ಗೋಡೆಗೆ ಕನ್ನ ಕೊರೆ
ಯಲು ನಿರ್ಧರಿಸಲಾಯಿತು. ಅರ್ಧ ಗಂಟೆಕಾಲ ಕಾರ್ಯಾಚರಣೆ ಬಳಿಕ, ಕನ್ನ ಕೊರೆದು ಎಲ್ಲರನ್ನು ಹೊರಗೆ ಕರೆ ತರಲಾಯಿತು.
ಹೆಚ್ಚುತ್ತಿರುವ ಲಿಫ್ಟ್  ಅವಘಡಗಳು
ಇದೇ ವರ್ಷ ಜುಲೈ 30ರಂದು ನಗರದ ನಾಗರಬಾವಿ ಫೋರ್ಟಿಸ್ ಆಸ್ಪತ್ರೆಯಲ್ಲಿ ನಡೆದ ಲಿಫ್ಟ್  ದುರಂತದಲ್ಲಿ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಡಯಾಲಿಸಿಸ್‍ಗೆಂದು ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಸಚ್ಚಿದಾನಂದಮೂರ್ತಿ (80) ಎಂಬುವವರು ಲಿಫ್ಟ್ ಗುಂಡಿ ಒತ್ತಿದ್ದರು. ಆದರೆ, ಕಾರ್ ಮೇಲೆ ಬಂದಿರದಿದ್ದರೂ ಬಾಗಿಲು ಮಾತ್ರ ತೆರೆದುಕೊಂಡಿತ್ತು. ಅದನ್ನು ಗಮನಿಸದ ಸಚ್ಚಿದಾನಂದ ಮೂರ್ತಿ ಅವರು ಒಳಗೆ ಕಾಲಿಟ್ಟುಬಿಟ್ಟಿದ್ದರು. ಹೀಗಾಗಿ ಆಳದ ಗುಂಡಿಗೆ ಬಿದ್ದಿದ್ದ ಅವರು ದಾರುಣವಾಗಿ ಮೃತಪಟ್ಟಿದ್ದರು. ಎಷ್ಟು ಹೊತ್ತಾದರೂ ಪತಿ ಬಾರದ ಹಿನ್ನೆಲೆಯಲ್ಲಿ ಸಚ್ಚಿದಾನಂತಮೂರ್ತಿ ಅವರ ಪತ್ನಿ ಆತಂಕಕ್ಕೀಡಾಗಿದ್ದರು. ಘಟನೆ ನಡೆದು ಒಂದು ದಿನದ ನಂತರ, ಸಿಸಿಟಿವಿ ದೃಶ್ಯಾವಳಿಗಳನ್ನು ಅವಲೋಕಿಸಿದಾಗ ಮೂರ್ತಿ ಅವರು ಲಿಫ್ಟ್  ಗುಂಡಿಗೆ ಬಿದ್ದು ಮೃತಪಟ್ಟಿರುವುದು ಬಯಲಿಗೆ ಬಂದಿತ್ತು. ಹೀಗೆ ಪ್ರತ್ಯೇಕಪ್ರಕರಣಗಳಲ್ಲಿ ಖ್ಯಾತನಾಮರಿಂದ ಹಿಡಿದು ಜನಸಾಮಾನ್ಯರವರೆಗೆ ಲಿಫ್ಟ್ ನಲ್ಲಿ ಸಿಕ್ಕಿಬಿದ್ದು ಪರದಾಡಿದ್ದಾರೆ. ಕೆಲವರು ದಾರುವಣವಾಗಿ ಅಂತ್ಯಕಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT