ಮಂಗಳೂರು: ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನದಿಗಳಿಗೆ ಕಿಂಡಿ ಅಣೆಕಟ್ಟೆ ನಿರ್ಮಿಸುವ ಪಶ್ಚಿಮವಾಹಿನಿ ಯೋಜನೆಗೆ ಹಠಾತ್ತನೆ ಮರುಜೀವ ಸಿಕ್ಕಿದೆ. 15 ವರ್ಷಗಳ ಹಿಂದೆ ಈ ಯೋಜನೆ ಬಗ್ಗೆ ಸರ್ಕಾರ ಪ್ರಸ್ತಾಪಿಸಿತ್ತು. ಇದೀಗ ಎತ್ತಿನಹೊಳೆ ವಿವಾದ ಕಾರಣಕ್ಕೆ ಪಶ್ಚಿಮವಾಹಿನಿ ಮಹತ್ವ ಪಡೆಯುತ್ತಿದೆ. 2000ನೇ ಇಸ್ವಿಯಲ್ಲಿ ಪ್ರಸ್ತಾಪಗೊಂಡ ಈ ಯೋಜನೆ 15 ವರ್ಷಗಳ ಬಳಿಕ ಮರುಜೀವ ಪಡೆಯುತ್ತಿದೆ. ಭವಿಷ್ಯದಲ್ಲಿಕರಾವಳಿಯಲ್ಲಿ ನೀರಿನ ಕೊರತೆಗೆ ಇತಿಶ್ರೀ ಹಾಕಲು ನದಿಗಳಿಗೆ ಸರಣಿ ಕಿಂಡಿ ಅಣೆಕಟ್ಟೆ ನಿರ್ಮಿಸಲು ಪ್ರಸ್ತಾಪಿಸಿತ್ತು. ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದಾಗ ಈ ಯೋಜನೆ ಬಗ್ಗೆ ಇಲಾಖಾ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಸುಮಾರು ರು.295 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಪ್ರಸ್ತಾಪ ಕಳುಹಿಸಿತ್ತು. ಗೋವಿಂದ ಕಾರಜೋಳ ಸಚಿವರಾಗಿದ್ದಾಗ ಇದರ ಅಂದಾಜು ಮೊತ್ತ ರು.423 ಕೋಟಿಗೆ ಏರಿಕೆಯಾಯಿತು. ಇದರಲ್ಲಿ 781 ಕಿಂಡಿ ಅಣೆಕಟ್ಟೆ ನಿರ್ಮಿಸುವ ವಿಚಾರವಿತ್ತು.
2014ರಿಂದ ವಿಧಾನಸಭಾ ಅಧಿವೇಶ ನಗಳಲ್ಲಿ, ಈ ಬಾರಿ ಬಜೆಟ್‍ನಲ್ಲಿ ಪ್ರಸ್ತಾಪಗೊಂಡದ್ದು ಬಿಟ್ಟರೆ ಯೋಜ ನೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. 2014ರಲ್ಲಿ ದ.ಕ.ದಲ್ಲಿ 256 ಕಿಂಡಿ
ಅಣೆಕಟ್ಟೆಗೆ ರು.82 ಕೋಟಿ, ಉಡುಪಿಯಲ್ಲಿ 160 ಕಿಂಡಿ ಅಣೆಕಟ್ಟೆಗೆ ರು. 128 ಕೋಟಿ ಸೇರಿ ಒಟ್ಟು 416 ಕಿಂಡಿ ಅಣೆಕಟ್ಟೆಗೆ ರು. 210 ಕೋಟಿ ಅಂದಾಜು ವೆಚ್ಚವನ್ನು ಸಣ್ಣ
ನೀರಾವರಿ ಇಲಾಖೆ ತಯಾರಿಸಿತ್ತು. ಈ ವರ್ಷ ಅಂದಾಜು ವೆಚ್ಚವನ್ನು ರು.730 ಕೋಟಿಗೆ ಏರಿಕೆ ಮಾಡಲಾಗಿದೆ. ದ. ಕ.ದಲ್ಲಿ 285 ಅಣೆಕಟ್ಟೆಗೆ ರು.339 ಕೋಟಿ, ಉಡುಪಿಯಲ್ಲಿ 332ಕ್ಕೆ ರು. 390 ಕೋಟಿ ಸೇರಿ ಒಟ್ಟು 617 ಅಣೆಕಟ್ಟೆಗೆ ರು. 729 ಕೋಟಿಯ ಪ್ರಸ್ತಾಪವನ್ನು ಸಣ್ಣ ನೀರಾವರಿ ಇಲಾಖೆ ಸರ್ಕಾರಕ್ಕೆ ಕಳುಹಿಸಿತು
ಅನುಷ್ಠಾನ ಯಾರು?: ಕಳೆದ ವರ್ಷ ಎತ್ತಿನಹೊಳೆ ಯೋಜನೆ ಜಾರಿಗೆ ಸರ್ಕಾರ ಹೊರಟಾಗ ಪಶ್ಚಿಮವಾಹಿನಿ ದ.ಕ. ಹಾಗೂ ಉಡುಪಿ ಜಿಲ್ಲೆಗೆ ಪ್ರಾಮುಖ್ಯತೆ ಪಡೆಯಿತು. ಪಶ್ಚಿಮ ಘಟ್ಟದಿಂದ ಹರಿಯುವ ನದಿ ನೀರು ಸಮುದ್ರ ಸೇರುವು ದರಿಂದ ಈ ಜಿಲ್ಲೆಗಳಲ್ಲಿ ಮೊದಲು ಪಶ್ಚಿಮವಾಹಿನಿ ಜಾರಿಗೆ ಆದ್ಯತೆ ನೀಡಬೇಕು ಎಂಬುದು ಜನಪ್ರತಿನಿಧಿಗಳ ಇಂಗಿತ. ಆದರೆ, ಅನುಷ್ಠಾನ ಮಾಡುವುದು ಯಾರು ಎಂಬ ಸಮಸ್ಯೆ ಬಗೆಹರಿಯಲಿಲ್ಲ.