ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಚೋರರ ಗುರು ಛತ್ರಸೇನಾ ಪೊಲೀಸರ ಅತಿಥಿ

ಸರಗಳ್ಳತನಕ್ಕೆ ಕುಖ್ಯಾತಿಯಾಗಿರುವ ಬವಾರಿಯ ತಂಡದ ನಾಯಕ ಛತ್ರಸೇನಾನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ಸರಗಳ್ಳತನಕ್ಕೆ ಕುಖ್ಯಾತಿಯಾಗಿರುವ ಬವಾರಿಯ ತಂಡದ ನಾಯಕ ಛತ್ರಸೇನಾನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ವಶಕ್ಕೆ ಪಡೆಯಲು ಬೆಂಗಳೂರು ಪೊಲೀಸರ ತಂಡ ಹರಿಯಾಣಕ್ಕೆ ಪ್ರಯಾಣ ಬೆಳೆಸಿದೆ. ಉತ್ತರಪ್ರದೇಶ ಮತ್ತು ಬಿಹಾರ ಜಿಲ್ಲೆಗಳಲ್ಲಿರುವ ಬವಾರಿಯಾ ಬುಡಕಟ್ಟು ಸಮುದಾಯದ ಯುವಕರ ತಂಡ ಕಟ್ಟಿಕೊಳ್ಳುತ್ತಿದ್ದ ಛತ್ರಸೇನಾ ಕಳ್ಳತನ ಮತ್ತು ಸರಗಳ್ಳತನ ಮಾಡಿಸುತ್ತಿದ್ದ. ಈ ತಂಡ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ  ರಾಜ್ಯಗಳ ನೂರಾರು ಪ್ರಕರಣಗಳಲ್ಲಿ ಭಾಗಿಯಾಗಿದೆ ಎನ್ನಲಾಗಿದೆ.

ಛತ್ರಸೇನಾ ಮತ್ತು ಮತ್ತೊಬ್ಬ ಆರೋಪಿ ರಾಕೇಶ್ ಬಂಧನಕ್ಕೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದ 4 ಪೊಲೀಸ್ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದವು. ಉತ್ತರಪ್ರದೇಶಕ್ಕೆ ತೆರಳಿ ಆರೋಪಿಗಳ ಬಂಧನಕ್ಕೆ ಯತ್ನಿಸಿ ಬರಿಗೈಯಲ್ಲಿ ವಾಪಸ್ಸಾಗಿದ್ದರು. ಈಗ ಛತ್ರಸೇನಾ ಹರಿಯಾಣ ಪೊಲೀಸರಿಂದ ಬಂಧಿತನಾಗಿದ್ದಾನೆಂಬ ಮಾಹಿತಿ ಸಿಕ್ಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ತಂಡದ ಸದಸ್ಯರಿಗೆ ಕಳ್ಳತನದ ತರಬೇತಿ ನೀಡುತ್ತಿದ್ದ ಛತ್ರಸೇನಾ ವಿವಿಧ ರಾಜ್ಯಗಳಿಗೆ ಅವರನ್ನು ಕಳುಹಿಸುತ್ತಿದ್ದ. ಅವರು ಕಳವು ಮಾಡಿಕೊಂಡು ತರುವ ವಸ್ತುಗಳನ್ನು ಏಜೆಂಟ್‍ರ ಮೂಲಕ ದೆಹಲಿಗೆ ತರಿಸಿಕೊಂಡು ಮಾರಾಟ ಮಾಡಿ ಬಂದ ಹಣದಲ್ಲಿ ಅರ್ಧ
ಭಾಗವನ್ನು ಕಳ್ಳತನ ಮಾಡುವವರ ಕುಟುಂಬಗಳಿಗೆ ತಲುಪಿಸುತ್ತಿದ್ದ. ತನ್ನ ತಂಡದ ಸದಸ್ಯರು ಪೊಲೀಸರಿಗೆ ಸಿಕ್ಕಿಬಿದ್ದರೆ ಅದೇ ಹಣ ಖರ್ಚು ಮಾಡಿ ಜಾಮೀನು ಕೊಡಿಸುತ್ತಿದ್ದ. ಛತ್ರಸೇನಾ ವಿರುದ್ಧ ನ್ಯಾಯಾಲಯಗಳಲ್ಲಿ 5 ಜಾಮೀನುರಹಿತ ಬಂಧನ ವಾರೆಂಟ್‍ಗಳು ಜಾರಿಯಗಿವೆ ಎಂದು ಪೊಲೀಸರು ಹೇಳಿದರು.

ಸರಗಳ್ಳರ ಮಾಸ್ಟರ್ ಮೈಂಡ್ ಛತ್ರಸೇನಾನನ್ನು ಅತ್ತ ಸೆರೆಹಿಡಿದಿದ್ದರೆ, ಇತ್ತ ಬೇಗೂರು ಮುಖ್ಯರಸ್ತೆಯ ಲೇಔಟ್‍ನಲ್ಲಿ ಭಾನುವಾರ ಬೆಳಿಗ್ಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ನಾಗಮಣಿ (55) ಎಂಬುವರ 30 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೂಜೆಗೆ ಹೂವು ತರಲು ಸಮೀಪದ ಅಂಗಡಿಗೆ ನಾಗಮಣಿ ಅವರು ನಡೆದು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್ ನಲ್ಲಿ  ಬಂದ  ದುಶ್ಕರ್ಮಿಗಳು ಸರ ಎಗರಿಸಿದ್ದಾರೆ. ನಾಗಮಣಿ ಅವರ ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಳ್ಳರು ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT