ನ್ಯಾ. ಸಂತೋಷ್ ಹೆಗಡೆ 
ಜಿಲ್ಲಾ ಸುದ್ದಿ

ಜನಪ್ರತಿನಿಧಿಗಳಿಗೇಕೆ ಕ್ಲಬ್‍ಗಳಲ್ಲಿ ಸದಸ್ಯತ್ವ?

ರಾಜ್ಯದ ಪ್ರತಿಷ್ಠಿತ ಕ್ಲಬ್‍ಗಳಲ್ಲಿ ಶಾಸಕ ಹಾಗೂ ಸಂಸದರಿಗೆ ಸದಸ್ಯತ್ವ ನೀಡಿದರೆ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವುದಿಲ್ಲ ....

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ಲಬ್‍ಗಳಲ್ಲಿ ಶಾಸಕ ಹಾಗೂ ಸಂಸದರಿಗೆ ಸದಸ್ಯತ್ವ ನೀಡಿದರೆ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಟೀಕಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಭಾನುವಾರ  ಮಾತನಾಡಿದ ಅವರು ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಭಾನುವಾರ  ``ಬೆಂಗಳೂರು ಸೇರಿ ದಂತೆ ರಾಜ್ಯದಲ್ಲಿರುವ ಎಲ್ಲ ಖಾಸಗಿ ಕ್ಲಬ್‍ಗಳಲ್ಲಿ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರಿಗೆ ಸದಸ್ಯತ್ವ ನೀಡುವ ಮಸೂದೆ ಉಭಯ ಸದನಗಳಲ್ಲಿ ಮಂಡನೆಯಾಗಲಿದೆ. ಆದರೆ, ಜನಪ್ರತಿನಿಧಿಗಳಿಗೆ ಸದಸ್ಯತ್ವ ನೀಡುವ ಅಗತ್ಯವಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವೂ ಇಲ್ಲ. ಕೇವಲ ಕೆಲವರ ಹಿತಾಸಕ್ತಿಗಾಗಿ ಸದಸ್ಯತ್ವ ನೀಡುವ ಕಾನೂನು ತರಲಾಗುತ್ತಿದೆ, ಇದರ ಅಗತ್ಯವೇನು? ಎಂದು ಅವರು ಪ್ರಶ್ನಿಸಿದರು.

``ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯವಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಪೈಪೋಟಿ ನೀಡುತ್ತಿವೆ. ಈ ವ್ಯವಸ್ಥೆ ಬದಲಿಸಲು ಲಾಖೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳನ್ನು ನಿಯಂತ್ರಿಸ ಬೇಕು. ಇದಕ್ಕಾಗಿ ಓಂಬುಡ್ಸಮನ್ ನೇಮಕ ಮಾಡಬೇಕು,'' ಎಂದು ಸಲಹೆ ನೀಡಿದರು.

``ರಾಜಕೀಯ ಪಕ್ಷಗಳು ದ್ವಂದ್ವ ನಿಲುವು ತಾಳುತ್ತಿವೆ. ಸರಕು ಮತ್ತು ಸೇವೆಗಳ ತೆರಿಗೆಯ ತಿದ್ದುಪಡಿಗೆ ಬಿಜೆಪಿ ಹಿಂದೆ ವಿರೋಧ ವ್ಯಕ್ತಪಡಿಸಿತ್ತು.  ಈಗ ಅದೇ ತಿದ್ದುಪಡಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.  ರಾಜಕೀಯ ಕಾರಣಗಳಿಗಾಗಿ ವಿರೋಧಿಸುವುದನ್ನು ಪಕ್ಷಗಳು ಬಿಡಬೇಕು,'' ಎಂದರು. ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಎಚ್.ಎನ್.ರವೀಂದ್ರ ಮಾತನಾಡಿ, ``ವೈದ್ಯರು ಹಾಗೂ ರೋಗಿಗಳ ನಡುವಿನ ಬಾಂಧವ್ಯದ ಅಂತರ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ವೈದ್ಯರು ರೋಗಿಗಳನ್ನು  ಗಿರಾಕಿಗಳಂತೆ ನೋಡುತ್ತಿದ್ದು, ರೋಗಿಗಳು ವೈದ್ಯರನ್ನು ವ್ಯಾಪಾರಿಗಳಂತೆ ಪರಿಗಣಿಸುತ್ತಿದ್ದಾರೆ. ವೈದ್ಯರನ್ನು ಹಿಂದೆ ದೇವರೆಂದು ಭಾವಿಸಲಾಗಿತ್ತು. ವೈದ್ಯರ ಬಗ್ಗೆ ಇದೇ ಭಾವನೆ ಬೆಳೆಯುವಂತೆ ಕೆಲಸ ಮಾಡಬೇಕು,'' ಎಂದರು. ವೈದ್ಯರಾದ ಡಾ.ಹೊನ್ನೇಗೌಡ, ಡಾ. ಚಿಕ್ಕನಂಜಪ್ಪ, ಡಾ. ಸಿ.ಶಿವಾನಂದಮಯ್ಯ, ಡಾ. ಎಚ್.ಎನ್.ರವೀಂದ್ರ ಕೆ.ರಾಮದೇವ್ ಅವರನ್ನು ಗೌರವಿಸಲಾಯಿತು.

ಭಾಸ್ಕರ್‍ರಾವ್‍ರನ್ನು ಆರೋಪಿಯಾಗಿಸಿ

ಲೋಕಾಯುಕ್ತ ಲಂಚ ಪ್ರಕರಣದಲ್ಲಿ ನ್ಯಾ. ಭಾಸ್ಕರ್‍ರಾವ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸಬೇಕು. ಹೀಗೆ ಮಾಡಿದರೆ ಪ್ರಕರಣದಲ್ಲಿ ಅವರೂ ಭಾಗಿಯಯಾಗಿದ್ದಾರೆಯೇ  ಇಲ್ಲವೇ ಎಂಬ ಸತ್ಯಾಂಶ ಹೊರಬರುತ್ತದೆ. ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ.

2011ರಲ್ಲಿ ನಾನು ಲೋಕಾಯುಕ್ತ ಆಗಿದ್ದಾಗ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವಿಸ್ತೃತ ವರದಿ ನೀಡಿದ್ದೆ. ನಂತರ ವರದಿಯ ಅಂಶ ಆಧಸಿರಿ ವಿಶೇಷ ತನಿಖಾ ತಂಡ ರಚಿಸಲಾಯಿತು. ಸಿಬಿಐ ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ನಂತರ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ ವರದಿ ವ್ಯರ್ಥವಾಗಿದೆ ಎಂದು ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT