ಬೆಂಗಳೂರು: ನಕಲಿ ರಸಾಯನಿಕ ದ್ರವ್ಯ ತಯಾರಕ ಘಟಕ ದ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಿ ರು.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಕಂಪನಿಗಳಾದ ಲೈಜಾಲ್, ಹಾರ್ಪಿಕ್, ಫೇಮ್, ಓಡೋನಿಲ್ ಸೇರಿದಂತೆ ಹಲವು ಕಂಪನಿಗಳ ಚಿಹ್ನೆ ಬಳಸಿ ಕಳಪೆ ಗುಣಮಟ್ಟದ ಸಾಮಗ್ರಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಕೋರಮಂಗಲ 8ನೇ ಬ್ಲಾಕ್ 2ನೇ ಕ್ರಾಸ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಮುಂಬೈ ಮೂಲದ ನೂರ್ ಜೈಸುಬಾಯ್ (36) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಗಳು ಕೆಲಸಕ್ಕೆ ಇಟ್ಟುಕೊಂಡಿದ್ದ ಗುಜರಾತ್ ಮೂಲದ 16 ಹಾಗೂ 13 ವರ್ಷದ ಬಾಲಕರನ್ನೂ ರಕ್ಷಿಸಲಾಗಿದೆ.