ಜಿಲ್ಲಾ ಸುದ್ದಿ

ಅ.14ಕ್ಕೆ ಔಷಧ ವ್ಯಾಪಾರ ಬಂದ್

Shilpa D

ಬೆಂಗಳೂರು: ಕೇಂದ್ರ ಸರ್ಕಾರವು ಆನ್‍ಲೈನ್ ಫಾರ್ಮಸಿ ಮೂಲಕ ಔಷಧ ಮಾರಾಟಕ್ಕೆ ಅನುಮತಿ ನೀಡುತ್ತಿರುವುದನ್ನು ಖಂಡಿಸಿ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಅ.14ರಂದು ಬಂದ್ ಆಚರಿಸಲು ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಘದ ಪದಾಧಿಕಾರಿಗಳಾದ ಎಂ.ಸಿ.ಮೇಧಪ್ಪ, ರಘುನಾಥ ರೆಡ್ಡಿ , ಎಸ್ ಶಿವಾನಂದ ಅವರು ಇತ್ತೀಚೆಗೆ  ಕೇಂದ್ರ ಸರ್ಕಾರ ಆನ್‍ಲೈನ್ ಫಾರ್ಮಸಿಯಲ್ಲಿ ಔಷಧ ಮಾರಾಟ  ಮಾಡುವುದಕ್ಕೆ ಅನುಮತಿ ನೀಡುತ್ತಿರುವುದರಿಂದ ಚಿಲ್ಲರೆ, ಸಗಟು ಔಷಧ ವ್ಯಾಪಾರ ನಂಬಿಕೊಂಡು ಬದುಕುತ್ತಿರುವವರು ಬೀದಿಗೆಬೀಳಲಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದರು. ಕೇಂದ್ರ ಸರ್ಕಾರದ ಡ್ರಗ್ಸ್ ಮತ್ತು ಕಾಸ್ಮೋಟಿಕ್ ಆಕ್ಟ್ 1950ರಂತೆ ಯಾವುದೇ ಔಷಧ ವಿತರಣೆ ಮುನ್ನ ವೈದ್ಯರ ಸಲಹೆ ಮುಖಾಂತರ ನೋಂದಾಯಿತ ಅರ್ಹ ಡ್ರಗಿಸ್ಟ್ ಮೂಲಕ ವಿತರಿಸಬೇಕೆಂದು ನಿಯಮವಿದೆ ಎಂದರು.

ಆದರೆ ಅದನ್ನು ಉಲ್ಲಂಘಿಸಿ ಮಾರಾಟ ಮಾಡುವುದು ಅಪರಾಧ. ಆನ್‍ಲೈನ್ ಫಾರ್ಮಸಿ ಮೂಲಕ ಔಷಧ ವಿತರಣೆ ಸಂದರ್ಭದಲ್ಲಿ ಅಮಲು ಬರುವ ಔಷಧ- ಗಳು ಸುಲಭ ರೀತಿಯಲ್ಲಿ ಮನೆ ಬಾಗಿಲಿಗೆ ದೊರಕುವುದರಿಂದ ಯುವಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಗ್ರಾಮಾಂತರ  ಪ್ರದೇಶದಲ್ಲಿ ಸರಿಯಾಗಿ ಔಷಧಿಗಳು ಸಿಗುವುದಿಲ್ಲ. ಜೀವ ರಕ್ಷಕ ಔಷಧಿಗಳಿಗೆ ಸಂಚಕಾರ ಉಂಟಾಗುತ್ತದೆ. ಇದನ್ನು ವಿರೋಧಿಸಿ ಅ.14ರಂದು ಔಷಧ ವ್ಯಾಪಾರ ಬಂದ್ ಮಾಡಲಾಗುವುದು ಎಂದು ಹೇಳಿದರು.

SCROLL FOR NEXT