ಜಿಲ್ಲಾ ಸುದ್ದಿ

ಜನರ ಖಾಸಗಿ ಮಾಹಿತಿ ರಕ್ಷಣೆ ಸರ್ಕಾರದ ಹೊಣೆ: ರಾಜೀವ್ ಚಂದ್ರಶೇಖರ್

ಬೆಂಗಳೂರು: ವ್ಯಕ್ತಿಯ ಖಾಸಗಿತನದ ಅಂಕಿ ಅಂಶಗಳನ್ನು ಸರ್ಕಾರ ಸಂಗ್ರಹ ಮಾಡಬಹುದು. ಆದರೆ ಅದನ್ನು ಹಾಗೆಯೇ ರಕ್ಷಿಸುವ ಹೊಣೆಗಾರಿಕೆಯನ್ನೂ ಸರ್ಕಾರ ಹೊರಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಲಹೆ ನೀಡಿದರು.

ಕ್ರೈಸ್ಟ್ ಕಾಲೇಜಿನಲ್ಲಿ ಬುಧವಾರ ಯೂತ್ ಫೋರಂ-ಫಾರಿನ್ ಫಾಲಿಸಿ ಆಯೋಜಿಸಿದ್ದ `ಈಸ್ ದಿ ಇಂಟರ್‍ನೆಟ್ ವಾಚಿಂಗ್ ಯೂ' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಕಾನೂನಿನ ಮೂಲಕ ದೇಶದ ಪ್ರಜೆಗಳ ಖಾಸಗಿ ವಿಚಾರಗಳನ್ನು ಸಂಗ್ರಹಿಸಿಡಬಹುದು. ಆದರೆ ಇದನ್ನು ಸೋರಿಕೆಯಾಗದಂತೆ ರಕ್ಷಿಸಿ ಇಡಬೇಕಾದ ಕರ್ತವ್ಯ ಸರ್ಕಾರದ್ದಾಗಿದೆ. ಅಂತರ್ಜಾಲದಲ್ಲಿ ಖಾಸಗಿ ಸಂಸ್ಥೆಗಳು ಇಂದು ತನ್ನ ಗ್ರಾಹಕ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದೆ. ವಿದೇಶ- ಗಳಲ್ಲಿ ಬೃಹತ್ ಕಂಪನಿಗಳು ಈ ಮಾಹಿತಿಗಳನ್ನು ದುರ್ಬಳಕೆ ಮಾಡಿವೆ. ಆದರೆ ಭಾರತದಲ್ಲೂ ಹೀಗೆಯೇ ಮಾಹಿತಿ ಸಂಗ್ರಹಿಸುವುದಾದರೆ ದುರ್ಬಳಕೆಯಾಗದಂತೆ ಎಚ್ಚರ ವಹಿಸಬೇಕಿರುವುದು ಸರ್ಕಾರದ ಕೆಲಸವಾಗಿದೆ.

ಸಂವಿಧಾನ ವಿಧಿ 21ರಲ್ಲಿ ಖಾಸಗಿತನ ಬಗ್ಗೆ ವ್ಯಾಖ್ಯಾನವಿದ್ದರೂ, ಅದು ಅಂತರ್ಜಾಲದ ಇಂದಿನ ಕಾಲವನ್ನು ವಿಸ್ತøತವಾಗಿ ವಿವರಿಸುವುದಿಲ್ಲ. ಹೀಗಾಗಿ ಪ್ರತ್ಯೇಕವಾದ ಬಲಿಷ್ಠ ಕಾನೂನನ್ನು ತಂದು ವ್ಯಕ್ತಿಗಳ ಖಾಸಗಿತನ ಸಂರಕ್ಷಿಸಬೇಕು ಎಂದರು. ದೇಶದಲ್ಲಿ ಆಧಾರ್ ಮೂಲಕ ಜನರ ಮಾಹಿತಿ ಸಂಗ್ರಹಿಸಿಡಲಾಗಿದೆ. ಇದು ಶಾಸಕಾಂಗದ ಅನುಮತಿ ಪಡೆಯದಿರುವುದರಿಂದ ಕಾನೂನಿನ ದೃಷ್ಟಿಯಲ್ಲಿ ತಪ್ಪು ಎಂದು ಹೇಳಲಾಗುತ್ತಿದೆ. ಸರ್ಕಾರ ಸೇವೆಗಳನ್ನು ನೀಡಲು ಪ್ರಜೆಗಳನ್ನು ಗುರುತಿಸುವು ದು ಕಡ್ಡಾಯವಾದರೂ, ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ. ದೇಶದ ಜನರು ಆಧಾರ್ ಚೀಟಿ ಪಡೆದಿದ್ದರೂ, ಅದರಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿದ್ದಾರೆ. ಹೀಗಾಗಿ ಖಾಸಗಿತನದ ಪ್ರಶ್ನೆ ಬಂದಾಗ ಕಾನೂನಿನ ಮೊರೆ ಹೋಗುವವರು ಕಡಿಮೆಯಾಗುತ್ತದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಒಂದು ಕಾನೂನು ರಚಿಸಲು ವಾಟ್ಸಾಪ್ ಸಂದೇಶವನ್ನು 90 ದಿನ ಅಳಿಸಬಾರದು ಎಂಬ ಷರತ್ತು ಹಾಕಲು ಮುಂದಾಗಿದ್ದು, ವಿವಾದಕ್ಕೀಡಾಗಿತ್ತು. ಫೇಸ್
ಬುಕ್, ಗೂಗಲ್ ಸೇರಿದಂತೆ ಅಂತರ್ಜಾಲ ಸೇವೆ ಬಳಸುವಾಗಲೂ ಮಾಹಿತಿಗಳನ್ನು ಸಂಸ್ಥೆಗಳು ಬಳಸಿಕೊಳ್ಳುತ್ತವೆ. ಒಂದು ವೇಳೆ ಖಾಸಗಿತನಕ್ಕೆ ಧಕ್ಕೆಯಾದರೆ ಆ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಬಹುದು. ಇದಕ್ಕೆ ಸರ್ಕಾರ ಬೆಂಬಲ ನೀಡಬೇಕು ಎಂದರು. ನಂದನ್ ಶರಾಲಯ, ಡಾ.ವೇಣುಗೋಪಾಲ್ ಮೆನನ್ ಹಾಜರಿದ್ದರು.

SCROLL FOR NEXT