ಮೈಸೂರು 
ಜಿಲ್ಲಾ ಸುದ್ದಿ

ಮೈಸೂರನ್ನು ಸ್ವಚ್ಛನಗರ ಎಂದು ಕರೆಯಲು ಕಾರಣಗಳೇನು?

ದೇಶದಲ್ಲಿ ಅತೀ ದೊಡ್ಡ ಮತ್ತು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲಿದೆ. ಜನಸಂಖ್ಯೆ ಹೆಚ್ಚಾದರೂ ಉತ್ತಮ ಚರಂಡಿ ವ್ಯವಸ್ಥೆಗಳಿರುವ ಕಾರಣ ಇಲ್ಲಿ ಯಾವುದೇ...

ಉತ್ತರ ಭಾರತದ ನಗರಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ನಗರಗಳು ಸ್ವಚ್ಛವಾಗಿದ್ದು, ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ಪ್ರಕಾರ ಭಾರತದಲ್ಲಿ ಮೈಸೂರು ನಗರ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಇದು ಹೆಮ್ಮೆಯ ವಿಷಯ. ಅಂದ ಹಾಗೆ ಮೈಸೂರು ಸ್ವಚ್ಛನಗರದ ಪಟ್ಟಿಯಲ್ಲಿ ಮೊದಲ ಸ್ಥಾನಗಳಿಸಲು ಕಾರಣಗಳೇನು? ಇಲ್ಲಿದೆ ಉತ್ತರ. 
ಚರಂಡಿ ವ್ಯವಸ್ಥೆ
ದೇಶದಲ್ಲಿ ಅತೀ ದೊಡ್ಡ ಮತ್ತು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲಿದೆ. ಜನಸಂಖ್ಯೆ ಹೆಚ್ಚಾದರೂ ಉತ್ತಮ ಚರಂಡಿ ವ್ಯವಸ್ಥೆಗಳಿರುವ ಕಾರಣ ಇಲ್ಲಿ ಯಾವುದೇ ರೀತಿಯ ಗಬ್ಬು ವಾಸನೆ ಪಸರಿಸುವುದಿಲ್ಲ. ಜೋರಾಗಿ ಮಳೆ ಸುರಿದರೂ ಮಳೆ ನೀರು ಚರಂಡಿ ಮೂಲಕ ಹರಿದು ಹೋಗುತ್ತದೆ. ಅಲ್ಲಲ್ಲಿ ಚರಂಡಿ ನೀರು ಕಟ್ಟಿ ನಿಲ್ಲದಂತೆಯೂ ಇಲ್ಲಿ ನೋಡಿಕೊಳ್ಳಲಾಗುತ್ತದೆ.
ಅತ್ಯುತ್ತಮ ಮೂಲಭೂತ ವ್ಯವಸ್ಥೆ
ಸಾಂಸ್ಕೃತಿಕ ನಗರಿ ಮೈಸೂರು. ರಾಜರ ಗತವೈಭವವನ್ನು ಸಾರುವ ಅರಮನೆ, ಉದ್ಯಾನಗಳ ನಡುವೆಯೇ ಈ ನಗರ ಆಕರ್ಷಣೆಯ ಕೇಂದ್ರವಾಗಿದೆ. ಕೆರೆ ಹಾಗೂ ಹಚ್ಚ ಹಸುರಿನ ಗಿಡ ಮರಗಳಿಂದ ಕಂಗೊಳಿಸುವ ಈ ನಗರದ ಮೂಲಭೂತ ಸೌಕರ್ಯಗಳೂ ಉತ್ತಮವಾಗಿವೆ. ಉತ್ತಮವಾದ ರಸ್ತೆ, ರೈಲು ಸಂಪರ್ಕ ವ್ಯವಸ್ಥೆಯೂ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತವೆ.
ತ್ಯಾಜ್ಯ ವಿಂಗಡನೆ ಮತ್ತು ನಿರ್ಮೂಲನೆ
ಇಲ್ಲಿನ ಜನರು ಹಸಿ ಮತ್ತು ಒಣ ಕಸಗಳನ್ನು ವಿಂಗಡಿಸುತ್ತಾರೆ. ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಹೇಗೆ ಮಾಡಬೇಕೆಂಬುದು ಇಲ್ಲಿಯವರಿಗೆ ಗೊತ್ತು. ಮನೆ ಮನೆಗೆ ಬಂದು ಕಸ ಸಂಗ್ರಹಿಸುವ ವ್ಯವಸ್ಥೆ ಇಲ್ಲಿದ್ದರೂ ವಸ್ತುಗಳನ್ನು ಹಿತ ಮಿತವಾಗಿ ಬಳಸಿ ಸಿಕ್ಕ ಸಿಕ್ಕಲ್ಲಿ ಕಸಗಳನ್ನು ಬಿಸಾಡದೆ ಇಲ್ಲಿನ ಜನರ ನಗರವನ್ನು ಸ್ವಚ್ಛವಾಗಿರಿಸಿದ್ದಾರೆ.
ಎನ್‌ಜಿಒ ಮತ್ತು ಸ್ಥಳೀಯ ಆಡಳಿತದ ನೆರವು
ನಗರವನ್ನು ಸ್ವಚ್ಛವಾಗಿರಿಸಲು ಇಲ್ಲಿ ಸರ್ಕಾರ ಮಾತ್ರವೇ ಕಾರ್ಯೋನ್ಮುಖರಾಗಿರುವುದಿಲ್ಲ. ಇಲ್ಲಿನ ಎನ್‌ಜಿಒ ಮತ್ತು ಸ್ಥಳೀಯ ಆಡಳಿತವೂ ಸ್ವಚ್ಛತೆಯ ಬಗ್ಗೆ ಅತೀವ ಕಾಳಜಿ ವಹಿಸುತ್ತದೆ. ಇಲ್ಲಿನ ನಾಗರಿಕರರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ನಿರಂತರ ನಡೆಯುತ್ತಿರುತ್ತವೆ,
ನೈರ್ಮಲ್ಯಕ್ಕೆ ಆದ್ಯತೆ
ಇಲ್ಲಿ ತೆರೆದ ಜಾಗದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವ ಬದಲು ಟಾಯ್ಲೆಟ್‌ಗಳಿವೆ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT