ಇಂಧನ ಸಚಿವ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ವಿದ್ಯುತ್ ವಿತರಣೆಗೆ 125 ಉಪ ಕೇಂದ್ರಗಳ ಸ್ಥಾಪನೆ

ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ವಿದ್ಯುತ್ ವಿತರಣೆಗೆ ಆಗುತ್ತಿರುವ ತೊಂದರೆ ತಡೆಯಲು 125 ವಿದ್ಯುತ್ ವಿತರಣಾ ಉಪಕೇಂದ್ರಗಳನ್ನು ಸ್ಥಾಪಿಸುವ ಗುರಿಯಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ...

ಬೆಂಗಳೂರು: ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ವಿದ್ಯುತ್ ವಿತರಣೆಗೆ ಆಗುತ್ತಿರುವ ತೊಂದರೆ ತಡೆಯಲು 125 ವಿದ್ಯುತ್ ವಿತರಣಾ ಉಪಕೇಂದ್ರಗಳನ್ನು ಸ್ಥಾಪಿಸುವ ಗುರಿಯಿದೆ ಎಂದು ಇಂ
ಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಯಲಹಂಕದಲ್ಲಿ ನೂತನವಾಗಿ ಪ್ರಾರಂಭವಾದ 66 ಕಿಲೋವ್ಯಾಟ್ ವಿದ್ಯುತ್ ಉಪಕೇಂದ್ರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 125 ವಿದ್ಯುತ್ ಉಪಕೇಂದ್ರಗಳಲ್ಲಿ 77 ಕೇಂದ್ರಗಳನ್ನು ಇದೇ ವರ್ಷ ಪ್ರಾರಂಭಿಸಲಾಗುವುದು. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಇಂಥಹ 66 ಕೆ.ವಿ. ಲೈನ್‍ಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.

ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 66 ಕೆ.ವಿ ವಿದ್ಯುತ್ ಪೂರೈಕೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, 60 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ
ಈ ಕೇಂದ್ರ ನಗರದ ಹೊರಭಾಗಗಳಿಂದ ಬೆಂಗಳೂರಿಗೆ ವಿದ್ಯುತ್ ಪೂರೈಕೆಗೆ ಆಗುತ್ತಿರುವ ತೊಂದರೆ ಸಂಪೂರ್ಣವಾಗಿ ನಿವಾರಣೆ ಯಾಗಲಿದೆ ಎಂದು ಹೇಳಿದರು.

ಈ ಕೇಂದ್ರ ಸ್ಥಾಪನೆಯಾಗುವುದಕ್ಕೂ ಮುನ್ನ ಪ್ರತಿ ವರ್ಷ ಆಗುತ್ತಿದ್ದ 16 ಕೋಟಿ ರು.ಗಳನ್ನು ಉಳಿಸುವಂತಾಗಿದೆ. ಅಲ್ಲದೆ, 45 ಕೋಟಿ ರೂ. ಆರ್ಥಿಕ ನಷ್ಟವೂ ನಿಲ್ಲಲಿದೆ. ಈ ಪ್ರಯೋಗ ದೇಶದಲ್ಲಿಯೇ ಮೊದಲ ಬಾರಿಗೆ ಮಾಡುತ್ತಿದ್ದು, 66 ಕೆ.ವಿ. ಕವರ್ಡ್ ವಾಹಕ ತಾಂತ್ರಿಕತೆ ಬಳಸಿ ಉಪಯೋಗಿಸಿ 11 ಮೀಟರ್ ಸ್ಪನ್ ಕಂಬದ ಮೇಲೆ ಈ ವಾಹಕ ಎಳೆದು ಹಾಲಿ ಇರುವ ಮಾರ್ಗವನ್ನು ಮುಕ್ತಗೊಳಿಸಿ 220-66 ಕೆ.ವಿ. ಎಂ.ಸಿ.ಎಂ.ವಿ. ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈ ಉಪಕೇಂದ್ರ ಹಾಗೂ ಲೈನ್ ನಿರ್ಮಾಣಕ್ಕೆ 60 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅಲ್ಲದೆ, ವಿದ್ಯುತ್ ಘಟಕದ ಪಕ್ಕದಲ್ಲಿರುವ ಗ್ಯಾಸ್ ಘಟಕಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ವಿದ್ಯುತ್ ಉಳಿತಾಯದ ಎಲ್‍ಇಡಿ ಬಲ್ಬ್ ಗಳನ್ನು ಮನೆ ಮನೆಗೆ ವಿತರಿಸುವ ಕಾರ್ಯ ಈ ತಿಂಗಳಿನಿಂದ ಚುರುಕಾಗಲಿದೆ. ಪ್ರಾಯೋಗಿಕವಾಗಿ ಬೆಸ್ಕಾಂ ಕಚೇರಿಯಲ್ಲಿ ಎಲ್ಇಡಿ ಬಲ್ಬ್‍ಗಳ ಮಾರಾಟವನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು. ಯಲಹಂಕ ಶಾಸಕ ಎಸ್.ಆರ್ ವಿಶ್ವ ನಾಥ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಕ್ತರ್ , ತಾಂತ್ರಿಕ ನಿರ್ದೇಶಕ ಸುಮಂತ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!