ಕಲ್ಲಡ್ಕ ಪ್ರಭಾಕರ್ ಭಟ್-ಶ್ಯಾಮ್ ಪ್ರಸಾದ್ ಶಾಸ್ತ್ರಿ
ಬೆಂಗಳೂರು: ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆಗೂ ಮುನ್ನ ಹಿಂದೂ ಪರ ಸಂಘಟನೆ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದರು ಎಂಬುದಕ್ಕೆ ಸಿಐಡಿಗೆ ಖಚಿತ ಸುಳಿವು ಲಭಿಸಿದೆ.
ರಾಫವೇಶ್ವರ ಶ್ರೀ ವಿರುದ್ಧದ ಪ್ರಕರಣದಲ್ಲಿ ಪ್ರೇಮಲತಾ ಪತಿ ದಿವಾಕರ್ ಶಾಸ್ತ್ರಿ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ 2014ರ ಸೆಪ್ಟೆಂಬರ್‍ನಲ್ಲಿ ಪುತ್ತೂರಿನ ಬಡೆಕ್ಕಿಲ ಗ್ರಾಮದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ಶ್ಯಾಮ್ ಪ್ರಸಾದ್ ಗೆ ಕಲ್ಲಡ್ಕ ಪ್ರಭಾಕರ್ ಭಟ್ ಕರೆ ಮಾಡಿದ್ದರು. ಈ ಸಂಬಂಧ ಸಿಐಢಿ ತನಿಖೆ ಆರಂಭಿಸಿತ್ತು. ಅಂದು ಕರೆ ಮಾಡಿದ್ದು ಕಲ್ಲಡ್ಕ ಪ್ರಭಾಕರ್ ಅವರೇ ಎಂಬುದು ಧ್ವನಿಯ ಫೋರೆನ್ಸಿಕ್ ಪರೀಕ್ಷೆಯಿಂದ ದೃಢಪಟ್ಟಿದೆ ಎನ್ನಲಾಗಿದೆ.