ಬೆಂಗಳೂರು: ಆಕಸ್ಮಿಕ ಬೆಂಕಿ ಅವಘಡದಿಂದ ಮನೆಯೊಂದರ ಎದುರು ನಿಲುಗಡೆ ಮಾಡಿದ್ದ ಐದು ಬೈಕ್ ಮತ್ತು ಕಾರು ಸುಟ್ಟು ಹಾನಿಯಾಗಿರುವ ಘಟನೆ ಬುಧವಾರ ತಡರಾತ್ರಿ ಎಚ್‍ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾರತ್‍ಹಳ್ಳಿಯ ರೆನ್ಸಿಲ್ ಎಂಬುವರ ಮನೆ ಎದುರು ಈ ಘಟನೆ ನಡೆದಿದೆ. ಎಂದಿನಂತೆ ಬುಧವಾರವೂ ಮನೆ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಐದು ಬೈಕ್ ಮತ್ತು ಕಾರನ್ನು ನಿಲುಗಡೆ ಮಾಡಿದ್ದರು. ಆದರೆ, ತಡರಾತ್ರಿ ಕಾರಿನ ಇಂಜಿನ್ ಬಳಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಪಕ್ಕದಲ್ಲಿದ್ದ ಬೈಕ್‍ಗಳಿಗೂ ತಗುಲಿದೆ. ಅವಘಡ ಗಮನಿಸಿದ ಕೆಲವರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದರು.
ವಾಹನದೊಂದಿಗೆ ಸ್ಥಳಕ್ಕಾಗಮಿಸಿ ದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಿಂದ ಅಷ್ಟೂ ವಾಹನಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿ ರಬಹುದೆಂದು ಶಂಕೆ ವ್ಯಕ್ತಪಡಿಸಿರುವ ಎಚ್ ಎಎಲ್ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.