ಹಾಸನ: "ರೈತರಿಗೆ ಹೆಚ್ಚು ಸಾಲ ಸಿಗುವಂತೆ ಮಾಡಲು ಅಪೆಕ್ಸ್ ಬ್ಯಾಂಕ್‍ನಲ್ಲಿನ ಸರ್ಕಾರದ ಠೇವಣಿ ಮೊತ್ತವನ್ನು ಹೆಚ್ಚಿಸಲಾಗುವುದು,'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಾಸನದಲ್ಲಿ ಮಾತನಾಡಿರುವ ಅವರು, ``ರೈತರಿಗೆ ಈಗ ಶೇ.3ರ ಬಡ್ಡಿ ದರದಲ್ಲಿ ರೂ. 3 ಲಕ್ಷದಿಂದ ರೂ. 10 ಲಕ್ಷದ ವರೆಗೆ ಸಾಲ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್‍ಗಳಲ್ಲಿನ ಸರ್ಕಾರದ ಠೇವಣಿ ಮೊತ್ತವನ್ನು ಹೆಚ್ಚಿಸಲಾಗುವುದು. ಆಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳಿಂದ ರೈತರಿಗೆ ಹೆಚ್ಚಿನ ಸಾಲ ದೊರೆಯುತ್ತದೆ,'' ಎಂದಿದ್ದಾರೆ.
100 ಭರವಸೆಗಳು ಈಡೇರಿವೆ: ಈಗ ಸರ್ಕಾರ ಅರ್ಧ ಅವ„ಯನ್ನು ಪೂರೈಸಿದೆ. ಪಕ್ಷ ಚುನಾವಣೆಗೆ ಮುನ್ನ ನೀಡಿದ್ದ 165 ಭರವಸೆಗಳ ಪೈಕಿ 100 ಭರವಸೆಗಳು ಈಡೇರಿವೆ. ನಾನಿನ್ನೂ 3 ಬಜೆಟ್ ಮಂಡಿಸುತ್ತೇನೆ.
ಅಷ್ಟರೊಳಗೆ ಉಳಿದ ಭರವಸೆಗಳನ್ನೂ ಈಡೇರಿಸುತ್ತೇನೆ,'' ಎಂದು ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ನ್ಯಾಯವನ್ನು ನೀಡುವುದು ಸಂವಿಧಾನ ಬದದ್ಧ ಕರ್ತವ್ಯ. ಅದನ್ನು ಮಾಡಿದರೆ ನಾನು ಅಹಿಂದ ಪರ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಅದಕ್ಕೆ ಹೆದರುವುದಿಲ್ಲ. ಅಹಿಂದ ಪರ ಎಂದೆನಿಸಿಕೊಳ್ಳಲು ನನಗೆ ಯಾವುದೇ ಮುಜುಗರವೂ ಇಲ್ಲ ಎಂದರು.
ಆ್ಯಪ್‍ಗೆ ಚಾಲನೆ: ಹಾಸನ ಪೊಲೀಸರು ಪರಿಚಯಿಸಿರುವ `ಎಫ್ಐಆರ್' ಎಂಬ ವಿನೂತನ `ಅ್ಯಪ್'ಗೆ ಸಿಎಂ ಸಿದ್ದರಾಮಯ್ಯ ಚಾಲನೆ ಕೊಟ್ಟರು. ಆಪಾಯದಲ್ಲಿ ಇರುವವರು ಈ ಆ್ಯಪ್‍ನಲ್ಲಿ ಇರುವ ಹೆಲ್ಪ್ ಬಟನ್ ಒತ್ತುವ ಮೂಲಕ ಹಾಸನ ಜಿಲ್ಲಾ ಪೊಲೀಸರ ನೆರವು ಪಡೆಯಬಹುದು. 3000 ಪೇದೆಗಳ ನೇಮಕ: ಈ ವರ್ಷ 3 ಸಾವಿರ ಕಾನ್‍ಸ್ಟೇಬಲ್ ಗಳನ್ನು ನೇಮಕ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.