ಮೇಯರ್ ಮಂಜುನಾಥ್ ರೆಡ್ಡಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸುಳ್ಳು ದಾಖಲೆ ನೀಡಿದ ಆರೋಪ: ಮೇಯರ್‍ಗೆ ಸಮನ್ಸ್

ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಆರೋಪದ ಪ್ರಕರಣ ಸಂಬಂಧ ಮೇಯರ್ ಮಂಜುನಾಥ್ ರೆಡ್ಡಿಗೆ ಸಿಟಿ ಸಿವಿಲ್ ಕೋರ್ಟ್ ಸಮನ್ಸ್ ನೀಡಲು ಆದೇಶಿಸಿದೆ.

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಆರೋಪದ ಪ್ರಕರಣ ಸಂಬಂಧ ಮೇಯರ್ ಮಂಜುನಾಥ್ ರೆಡ್ಡಿಗೆ  ಸಿಟಿ ಸಿವಿಲ್ ಕೋರ್ಟ್ ಸಮನ್ಸ್ ನೀಡಲು ಆದೇಶಿಸಿದೆ.

ಮಂಜುನಾಥ್ ರೆಡ್ಡಿ ಮಡಿವಾಳ ವಾರ್ಡ್‍ನಿಂದ ಚುನಾವಣೆಗೆ ಸ್ಪರ್ಧಿಸುವ ವೇಳೆ, ನಾನು ಪಾನ್ ಕಾರ್ಡ್ ಹೊಂದಿಲ್ಲ. ಕಂದಾಯ ಕಟ್ಟಿಲ್ಲ ಎಂದು ಸುಳ್ಳು ಪ್ರಮಾಣಪತ್ರ ನೀಡಿ ಚುನಾವಣಾ ಆಯೋಗಕ್ಕೆ  ಸುಳ್ಳು ಮಾಹಿತ ನೀಡಿದ್ದಾರೆ. ಆದರೆ, ರೆಡ್ಡಿ ಅವರು ಪಾವಗಡ ಸಹಕಾರಿ ಬ್ಯಾಂಕ್‍ನಲ್ಲಿ ರು.28 ಲಕ್ಷ ಹಾಗೂ ಐಸಿಐಸಿಐ ಬ್ಯಾಂಕ್‍ನಲ್ಲಿ ರು.5 ಲಕ್ಷ ಪಡೆದಿದ್ದಾರೆ. ಯಾವುದೇ ಬ್ಯಾಂಕ್ ಇಷ್ಟೊಂದು  ಹಣವನ್ನು ಪಾನ್ ಕಾರ್ಡ್ ಇಲ್ಲದೆ ಕೊಡುವುದಿಲ್ಲ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ವಕೀಲ ಅಮೃತೇಶ್,  ಮಂಜುನಾಥ್ ರೆಡ್ಡಿ ವಿರುದ್ಧ ಕೋರ್ಟ್‍ಗೆ ದೂರು ಸಲ್ಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಚರ್ಚೆಗೆ ಕೇಂದ್ರ ಸಿದ್ಧ, 'ಯಾವುದೇ ಷರತ್ತು ಹಾಕಬೇಡಿ' ಎಂದ ಸಚಿವ ರಿಜಿಜು; ಪ್ರತಿಪಕ್ಷಗಳ ಸಭಾತ್ಯಾಗ!

ಗಂಭೀರ್- ಕೊಹ್ಲಿ ನಡುವೆ ಬಿರುಕು: ವದಂತಿಗೆ ಪುಷ್ಠಿ ನೀಡುವಂತೆ Video ವೈರಲ್! ಏನಿದು?

ಬೆಂಗಳೂರು ವಿಮಾನ ನಿಲ್ದಾಣದ ಪಿಕಪ್, ಡ್ರಾಪ್ ಪ್ರದೇಶದಲ್ಲಿ ಹೆಚ್ಚು ಟೈಮ್ ನಿಲ್ಲಿಸುವ ವಾಹನಗಳಿಗೆ ದುಬಾರಿ ಶುಲ್ಕ!

Sanchar Saathi ಆ್ಯಪ್ ಅಳವಡಿಕೆ ಕಡ್ಡಾಯವೇ? ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ; Video

'ಬ್ರದರ್ಸ್' ಬ್ರೇಕ್‏ಫಾಸ್ಟ್-2: ಹೈಕಮಾಂಡ್ ಹೇಳಿದಾಗ 'ಡಿಕೆ ಸಿಎಂ' ಎಂದ ಸಿದ್ದರಾಮಯ್ಯ; ಡಿಸೆಂಬರ್ 8ಕ್ಕೆ ದೆಹಲಿ ಭೇಟಿ-DKS; Video

SCROLL FOR NEXT