ಮೂಲ್ಕಿ: ದಕ್ಷಿಣ ಕನ್ನಡದ ಮೂಲ್ಕಿ ಬಪ್ಪನಾಡು ದೇವಸ್ಥಾನ ಸಮೀಪದ ಬಡಗಹಿತ್ಲುವಿನಲ್ಲಿ 6 ವರ್ಷದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡ ತಂದೆ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಡ್ಡೋಡಿಯ ನಿವಾಸಿ ದಿವಾಕರ್ (35), ಪುತ್ರಿ ಧೃತಿ (6) ಮೃತರು. ಶನಿವಾರ ಬೆಳಗ್ಗೆ ಶಾಂಭವಿ ನದಿಯಲ್ಲಿ ಶವ ತೇಲುತ್ತಿದುದನ್ನು ಕಂಡ ಸ್ಥಳೀಯರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ಬೆನ್ನಿಗೆ ಕಟ್ಟಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ದಿವಾಕರ್ ವೃತ್ತಿಯಿಂದ ಎಲೆಕ್ಟ್ರೀಶಿಯನ್ ಆಗಿದ್ದು, ಡಿ.ಜೆ. ಸೌಂಡ್ಸ್ ನಡೆಸುತ್ತಿದ್ದರು. ಪತ್ನಿ ದೇವಿಕಾ ಮನೆಯಲ್ಲಿದ್ದರು. ಶುಕ್ರವಾರ ರಾತ್ರಿ ಮಗುವಿನೊಂದಿಗೆ ಮನೆಯಿಂದ ಹೊರಟ್ಟಿದ್ದು, ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.