ಜಿಲ್ಲಾ ಸುದ್ದಿ

ಸಂಸದೀಯ ಕಾರ್ಯದರ್ಶಿ ನೇಮಕ; ಸರ್ಕಾರಕ್ಕೆ ನೋಟಿಸ್ ಜಾರಿ

Srinivas Rao BV

ಬೆಂಗಳೂರು: ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ವಿಧಾನಸಭೆಯ 10 ಹಾಗೂ ವಿಧಾನ ಪರಿಷತ್ ನ ಒಬ್ಬ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಸರ್ಕಾರ ಇತ್ತೀಚಿಗೆ ನೇಮಕ ಮಾಡಿದೆ. ಈ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಜನತಾ ಪಕ್ಷದ ಪದ್ಮನಾಭ ಪ್ರಸನ್ನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. 

ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ಮತ್ತು ನ್ಯಾ.ರವಿ ಮಳಿಮಠ ಅವರಿದ್ದ ನ್ಯಾಯಪೀಠ ಸರ್ಕಾರ ಮತ್ತು 11 ಮಂದಿ ಕಾರ್ಯದರ್ಶಿಗಳಿಗೂ ನೊಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಈ ಆದೇಶದ ಸಂವಿಧಾನದ ಅನುಚ್ಛೇದ 164 ರ ಪ್ರಕಾರ  ಒಟ್ಟು ಶಾಸಕರಲ್ಲಿ ಶೇ.15 ರಷ್ಟು ಮಾತ್ರ ಸಚಿವರಿರಬೇಕು ಎಂಬ ನಿಯಮವಿದೆ. ಆದರೆ ಸರ್ಕಾರ ನಿಯಮವನ್ನು ಉಲ್ಲಂಘಿಸಿ ಸಚಿವರ ಸ್ಥಾನಮಾನ ನೀಡಿ 11 ಜನ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ. ಇದು ಸಂವಿಧಾನ ಮತ್ತು ಕಾನೂನು ಬಾಹಿರವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

SCROLL FOR NEXT