ಜಿಲ್ಲಾ ಸುದ್ದಿ

ಎನ್ಎಸ್ ಜಿ ರೀತಿ ಗರುಡ ತಾಲೀಮು

Srinivas Rao BV

ಬೆಂಗಳೂರು: ಪಂಜಾಬ್‍ನ ಪಠಾಣ್ ಕೋಟ್‍ನಲ್ಲಿ ನಡೆದ ಉಗ್ರರ ದಾಳಿಯಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಶಕ್ತಿ ಕೇಂದ್ರವಾದ ವಿಧಾನಸೌಧ ಸೇರಿದಂತೆ ನಗರದ ಪ್ರಮುಖ ಸ್ಥಗಳಲ್ಲಿ ಎನ್‍ಎಸ್‍ಜಿ ಮಾದರಿಯ ಗರುಡ ಪಡೆ ನಿಯೋಜಿಸಲು ತೀರ್ಮಾನಿಸಿದೆ.

ಈ ಸಂಬಂಧ ಬುಧವಾರ ಗರುಡ ತಂಡದವರು ಎನ್‍ಎಸ್‍ಜಿ ಮಾದರಿಯಂತೆ ವಿಕಾಸ ಸೌಧದಲ್ಲಿ ರಕ್ಷಣಾ ತಾಲೀಮು ನಡೆಸಿದರು. ರಾಜ್ಯದ ಗರುಡ ಪಡೆಯಲ್ಲಿರುವ ಒಟ್ಟು 250 ಮಂದಿ ಪೈಕಿ 110 ಮಂದಿಯನ್ನು ತಾಲೀಮಿನಲ್ಲಿ ಬಳಸಿಕೊಳ್ಳಲಾಯಿತು. ಚೆನ್ನೈ ಮತ್ತು ಹೈದರಾಬಾದ್ ಎನ್ ಎಸ್ ಜಿ ಘಟಕದಿಂದ 50 ಮಂದಿ ಯೋಧರು ನಗರಕ್ಕೆ ಆಗಮಿಸಿ ಈ 110 ಮಂದಿಗೆ ತರಬೇತಿ ನೀಡಿದರು.

ಎರಡು ದಿನಗಳ ಹಿಂದೆಯೆ ಇಡಿ ವಿಧಾನಸೌಧವನ್ನು ಪರಿಶೀಲಿಸಿದ್ದ ಎನ್ಎಸ್ ಜಿ ಎಲ್ಲೆಲ್ಲಿ ಗರುಡ ಪಡೆ ನಿಯೋಜಿಸಬೇಕು ಎಂಬುದನ್ನು ಗುರುತಿಸಿದ್ದರು. ಅದರಂತೆ ಕಟ್ಟಡ  ಏರುವುದು, ಇಳಿಯುವುದು ಶಸ್ತ್ರ ಸಜ್ಜಿತವಾಗಿ ನಿಲ್ಲುವುದು ಸೇರಿದಂತೆ ಪ್ರಮುಖ ರಕ್ಷಣಾ ತಂತ್ರಗಳನ್ನು ಹೇಳಿಕೊಡಲಾಯಿತು.

SCROLL FOR NEXT