ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಬುಧವಾರ ನಗರದಲ್ಲಿ ಆಯೋಜಿಸಿದ್ದ ಫ್ರೀಡಂಜಾಥಾ ಕಾರ್ಯಕ್ರಮದಲ್ಲಿ ಸುರೇಂಧರ್ ರಾವ್, ಜನ ನಾಟ್ಯ ಮಂಚ್‍ನ ಸುಧನ್ವ ದೇಶಪಾಂಡೆ,ಚಿತ್ರನಿದೇರ್ಶಕ ಎಂ.ಎಸ್. 
ಜಿಲ್ಲಾ ಸುದ್ದಿ

ಪ್ಯಾಲೆಸ್ತೀನ್ ಕಲಾವಿದರ ದೇಶ: ಎಂ.ಎಸ್.ಸತ್ಯು

ಎಲ್ಲ ಧರ್ಮಗಳು ಅಹಿಂಸೆ ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತವೆ. ಆದರೆ, ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಧರ್ಮವೇ ಮೂಲ ಕಾರಣವೆಂಬುವುದು ದುರದೃಷ್ಟಕರ ಎಂದು ಹಿರಿಯ ಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ತಿಳಿಸಿದ್ದಾರೆ...

ಬೆಂಗಳೂರು: ಎಲ್ಲ ಧರ್ಮಗಳು ಅಹಿಂಸೆ ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತವೆ. ಆದರೆ, ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಧರ್ಮವೇ ಮೂಲ ಕಾರಣವೆಂಬುವುದು ದುರದೃಷ್ಟಕರ
ಎಂದು ಹಿರಿಯ ಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ತಿಳಿಸಿದ್ದಾರೆ.

ಬುಧವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ `ಫ್ರೀಡಂ ಜಾಥಾ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಗಳಲ್ಲಿನ ತಿರುಳನ್ನು ಅರ್ಥ ಮಾಡಿಕೊಳ್ಳದ ಕೆಲವರು ಹಿಂಸಾ ಕೃತ್ಯಗಳನ್ನು ನಡೆಸುತ್ತಿದ್ದು, ಏಷ್ಯಾದಲ್ಲಿ ಶಾಂತಿಯನ್ನು ಹಾಳು ಮಾಡಿ, ಯುದ್ಧದ ವಾತಾವರಣ ಸೃಷ್ಟಿಸುವುದು ಅಮೆರಿಕದ ಉದ್ದೇಶ, ಕಾರಣ ಯುದ್ಧಗಳು ಕಡಿಮೆಯಾದರೆ ಅಮೆರಿಕದಲ್ಲಿ ಉತ್ಪಾದನೆಯಾಗುವ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಕಡಿಮೆಯಾಗಿ ಆರ್ಥಿಕ ಹಿನ್ನಡೆ ಉಂಟಾಗುತ್ತದೆ ಎಂಬ ಭೀತಿಯಿಂದ ಯುದ್ದಗಳನ್ನು ನಿಲ್ಲಿಸಲು ಮುಂದಾಗುವುದಿಲ್ಲ. ಹೀಗಾಗಿ ಎಲ್ಲ ದೇಶಗಳು ವಾಸ್ತವ ಸ್ಥಿತಿಯನ್ನು ಅರಿತು ಶಾಂತಿ-ಸಹಬಹಾಳ್ವೆಯನ್ನು ಕಾಯ್ದುಕೊಂಡು ಬದುಕಬೇಕು ಎಂದು ಹೇಳಿದರು.

ಪ್ಯಾಲೆಸ್ತೀನ್ ನ ಫ್ರೀಡಂ ಥಿಯೇಟರ್ ನ ಫೈಸಲ್ ಅಬು ಅಲ್ಲಾಜ್ ಮಾತನಾಡಿ, ವಿಶ್ವಮಟ್ಟದಲ್ಲಿ ಪ್ಯಾಲೆಸ್ತೀನ್ ಎಂದರೆ ಆಕ್ರಮಣ, ದಾಳಿ, ಹಿಂಸೆ, ಭಯೋತ್ಪಾದನೆ, ನೋವುಗಳು ಜನರ ಎದುರಿಗೆ ಬರುತ್ತವೆ. ಆದರೆ, ನಿಜವಾಗಿ ಅಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ನಾವು ಮೂಲತಃ ಕಲಾವಿದರು ಆದರೆ ಇಲ್ಲಿಗೆ ಹೋರಾಟಗಾರರಾಗಿ ಬಂದಿದ್ದೇವೆ ಎಂದು ಹೇಳಿದರು.

ನಮ್ಮನ್ನು ಭಯೋತ್ಪಾದಕರ ರೀತಿಯಲ್ಲಿ ಬಿಂಬಿಸಲಾಗುತ್ತಿದ್ದು, ನಾವು ಶಾಂತಿಗಾಗಿ ಕಾಯುತ್ತಿದ್ದೇವೆ. ನಮ್ಮ ಆಶಯಗಳು, ತುಡಿತಗಳು ಹಾಗೂ ನಮ್ಮ ನೋವುಗಳನ್ನು ಚಲನಚಿತ್ರ, ಪತ್ರಿಕೆ ಹಾಗೂ ನಿಯತಕಾಲಿಕೆಗಳ ಮೂಲಕ ವಿಶ್ವಕ್ಕೆ ತಿಳಿಸಲಾಗುತ್ತಿದೆ ಎಂದು ಹೇಳಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಂಧರ್ ಮಾತನಾಡಿ, ಯಾವು್ದೇ ಎರಡು ದೇಶಗಳು ಯುದ್ಧ ಮಾಡುತ್ತಿವೆ ಎಂದರೆ ಎರಡೂ ದೇಶಗಳ ಬಳಿ ಶಸ್ತ್ರಾಸ್ತ್ರಗಳು ಇರಬೇಕು. ಆದರೆ, ಪ್ಯಾಲೆಸ್ತೀನ್ ಬಳಿ ಇರುವುದು ಕೇವಲ ಕಲ್ಲುಗಳು ಮಾತ್ರ. ಆದರೆ, ಇಸ್ರೇಲ್ ಆಧುನಿಕ ಶಸ್ತ್ರಾಸ್ತ್ರಗಳ ಮೂಲದ ದಾಳಿ ನಡೆಸುತ್ತಿದ್ದು, ಇಸ್ರೇಲ್ ಮೇಲೆ ಸಾಂಸ್ಕೃತಿಕ ಬಹಿಷ್ಕಾರ ಹೇರಬೇಕು ಆದರೆ, ಭಾರತ ಇಸ್ರೇಲ್ ನೊಂದಿಗೆ ಸಂಬಂಧ ಬೆಳೆಸಿ ದೇಶದ ತೆರಿಗೆ ಹಣವನ್ನು ಇಸ್ರೇಲ್ ಗೆ ನೀಡುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT