ಅಂಚೆ ಇಲಾಖೆ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಮಂಗಳೂರಲ್ಲೂ ಪರದಾಟ ಹಳ್ಳಿ ಜನ ಕಾದು ವಾಪಸ್

ಜಿಲ್ಲೆಯಲ್ಲಿಯೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತೊಂದರೆಯಾಗಿದೆ. ಬೆಳಗ್ಗೆ 10ರಿಂದ ಸಂಜೆ 5.15ರವರೆಗೂ ಸರ್ವರ್‍ಗಳು ನಿಧಾನವಾಗಿ ಕೋರ್ ಬ್ಯಾಂಕಿಂಗ್ ಕೆಲಸಕ್ಕೆ ತೊಂದರೆಯಾಗುತ್ತಿದೆ...

ಮಂಗಳೂರು: ಜಿಲ್ಲೆಯಲ್ಲಿಯೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತೊಂದರೆಯಾಗಿದೆ. ಬೆಳಗ್ಗೆ 10ರಿಂದ ಸಂಜೆ 5.15ರವರೆಗೂ ಸರ್ವರ್‍ಗಳು ನಿಧಾನವಾಗಿ ಕೋರ್ ಬ್ಯಾಂಕಿಂಗ್ ಕೆಲಸಕ್ಕೆ ತೊಂದರೆಯಾಗುತ್ತಿದೆ.

ಇದರಿಂದ ಅಂಚೆ ಕಚೇರಿಗಳಲ್ಲಿ ಗ್ರಾಹಕರಿಗೆ ತೊಂದರೆಯಾಗಿದೆ. ದೇಶದಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಈ ತೊಂದರೆ ಕಾಣಿಸಿದೆ. ಪಿನಾಕಲ್ ಸಾಫ್ಟ್ ವೇರ್‍ನಿಂದ ಇನ್ಫೋಸಿಸ್  ತಂತ್ರಜ್ಞರು ಕೋರ್ ಬ್ಯಾಂಕಿಂಗ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆಸುತ್ತಿದ್ದಾರೆ. ಕೋರ್ ಬ್ಯಾಂಕಿಂಗ್ ನಲ್ಲಿ ಒಂದು ಅಂಚೆ ಕಚೇರಿಯ ಗ್ರಾಹಕರ ಎಲ್ಲ ವಿವರಗಳನ್ನು ಎಲ್ಲ ಅಂಚೆ ಕಚೇರಿಗಳಿಗೆ  ಡಾಟಾ ಮೂಲಕ ರವಾನಿಸುವುದು. ಈ ಸೌಲಭ್ಯದಿಂದ ಗ್ರಾಹಕರು ಯಾವುದೇ ಅಂಚೆ ಕಚೇರಿಯಲ್ಲಿ ಹಣಕಾಸು ವಹಿವಾಟು ನಡೆಸಬಹುದು.

ಅಂಚೆ ಕಚೇರಿಯ ಬ್ಯಾಂಕಿಂಗ್‍ನ ಮುಖ್ಯ ಸರ್ವರ್ ಮುಂಬಯಿನಲ್ಲಿದೆ. ಎಲ್ಲ ಅಂಚೆ ಕಚೇರಿಗಳ ಸರ್ವರ್ ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದ್ದು ಸರ್ವರ್‍ಗಳ ಕೆಲಸ ನಿಧಾನವಾಗುತ್ತಿದೆ.  ಈ ಕಾರ್ಯ ಮಾರ್ಚ್ ಒಳಗೆ ಮುಕ್ತಾಯಗೊಳ್ಳಬೇಕು. ರಾಜ್ಯದಲ್ಲಿ ಸುಮಾರು 1,580 ಅಂಚೆ ಕಚೇರಿಗಳಿದ್ದು, ಇನ್ನೂ 70 ಕಚೇರಿಗಳನ್ನು ಕೋರ್‍ಬ್ಯಾಂಕಿಂಗ್ ಸೌಲಭ್ಯಕ್ಕೆ ಸೇರ್ಪಡೆಗೊಳಿಸಲು ಬಾಕಿ  ಇದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ 28 ಸಾವಿರ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT