ಕುಷ್ಠರೋಗ ವಿಮುಕ್ತನಿಗೆ ವಿವಾಹ ಭಾಗ್ಯ 
ಜಿಲ್ಲಾ ಸುದ್ದಿ

ಕುಷ್ಠರೋಗ ವಿಮುಕ್ತನಿಗೆ ವಿವಾಹ ಭಾಗ್ಯ

ಕುಷ್ಠರೋಗದಿಂದ ವಿಮುಕ್ತವಾದ ವ್ಯಕ್ತಿಯ ಬಾಳಲ್ಲಿ ಬೆಳಕು ಮೂಡಿದ್ದು, ಆತನನ್ನು ಬೆಂಗಳೂರಿನ ಚಿಕ್ಕನಾಯ ಕನಹಳ್ಳಿಯ ಯುವತಿ ಲಕ್ಷ್ಮೀ ಕೈ ಹಿಡಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ...

ಬೆಂಗಳೂರು: ಕುಷ್ಠರೋಗದಿಂದ ವಿಮುಕ್ತವಾದ ವ್ಯಕ್ತಿಯ ಬಾಳಲ್ಲಿ ಬೆಳಕು ಮೂಡಿದ್ದು, ಆತನನ್ನು ಬೆಂಗಳೂರಿನ ಚಿಕ್ಕನಾಯ ಕನಹಳ್ಳಿಯ ಯುವತಿ ಲಕ್ಷ್ಮೀ ಕೈ ಹಿಡಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

ಬೆಂಗಳೂರಿನ ಜೈನ್ ಅಸೋಸಿಯೇಷನ್‍ನಲ್ಲಿ ಶನಿವಾರ ನಡೆದ ವಿವಾಹಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿ ಹಾರೈಸಿದರು. ಹಲವು ವರ್ಷಗಳಿಂದ ಕುಷ್ಠರೋಗದಿಂದ ಬಳಲುತ್ತಿದ್ದ ಕನಕಪುರದ ಗುಂಡಪ್ಪ ಈಗ ಕುಷ್ಠರೋಗ ದಿಂದ ಮುಕ್ತವಾಗಿದ್ದು ಆತನಿಗೆ ಸಂಸಾರದ ಹೊಣೆ ಕಟ್ಟಿಕೊಟ್ಟದ್ದು ಚಾರುಕೀರ್ತಿ ಭಟ್ಟಾರಕರ ವೇದಿಕೆ. ಗುಂಡಪ್ಪ ಸುಮನಹಳ್ಳಿ ಕುಷ್ಠರೋಗಿಗಳ ಪುನರ್ ವಸತಿ ಕೇಂದ್ರ ದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಜಯನಗರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕುಷ್ಠ ರೋಗ ಅಂಟು ಕಾಯಿಲೆಯಲ್ಲ ಎಂಬುದನ್ನು ಈತ ನಿರೂಪಿಸಿದ್ದಾನೆ, ಜತೆಗೆ ಇಂಥದೇ ಸಮಸ್ಯೆ ಎದುರಿಸುತ್ತಿರುವ ನೂರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಚಾರುಕೀರ್ತಿ ಭಟ್ಟಾರಕರ ವೇದಿಕೆ ಹಲವು ದಶಕಗಳಿಂದ ವಿಕಲಚೇತನರು, ಕುಷ್ಠರೋಗಿಗಳಿಗೆ ಮದುವೆ ಯನ್ನು ಮಾಡಿಸಿಕೊಂಡು ಬಂದಿದ್ದು, ಇದು 26ನೇ ಮದುವೆಯಾಗಿದೆ. ಗುಂಡಪ್ಪನ ಮದುವೆ ಸಾಮಾನ್ಯರ ಮದುವೆಯಂತೆಯೇ ಅದ್ಧೂರಿಯಾಗಿ ನಡೆಯಿತು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶಾಸಕ ರವಿಸುಬ್ರಹ್ಮಣ್ಯ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಗಾಯಕ ಶಿವಮೊಗ್ಗ ಸುಬ್ಬಣ್ಣ, ವೇದಿಕೆಯ ಅಧ್ಯಕ್ಷ ಡಾ.ನಾಗೇಂದ್ರ ಪ್ರಸಾದ್ ಸೇರಿದಂತೆ 350ಕ್ಕೂ ಜನರು ಈ ಅಪರೂಪದ ಮದುವೆಯನ್ನು ಕಣ್ತುಂಬಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT