ಜಿಲ್ಲಾ ಸುದ್ದಿ

ಟಿಪ್ಪು ಸುಲ್ತಾನ್ ಐಕಾನ್ ಆದ್ರೆ ತಪ್ಪೇನು?

Shilpa D

ಮೈಸೂರು: ಲಿಂಗಾಯಿತರು ಬಸವಣ್ಣನನ್ನು, ದಲಿತರು ಅಂಬೇಡ್ಕರರನ್ನು ತಮ್ಮ ಸಾಂಸ್ಕೃತಿಕ ನಾಯಕ ರೆಂದು ಗುರುತಿಸಿಕೊಳ್ಳುತ್ತಿರುವಾಗ ಮುಸ್ಲಿಂ ಯುವಕರು ಟಿಪ್ಪುವನ್ನು ತಮ್ಮ ಐಕಾನ್ ಎಂದು ಗುರುತಿಸಿಕೊಂಡರೆ ತಪ್ಪೇನು; ಯಾರಿಗೇನು ನಷ್ಟ' ಎಂದು ಹಿರಿಯ ಲೇಖಕಿ ಬಾನು ಮುಷ್ತಾಕ್ ಪ್ರಶ್ನಿಸಿದ್ದಾರೆ. ರಂಗಾಯಣದ `ಬಹುರೂಪಿ' ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ `ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕ; ಈ ಕಾಲದ ಪ್ರತಿಭಟನೆಯ ಸ್ವರೂಪಗಳು' ವಿಷಯ ಕುರಿತು ಮಾತನಾಡಿದ ಅವರು, `ಮುಸ್ಲಿಂ ಯುವಕರು ಟಿಪ್ಪುವಿನಲ್ಲಿ ತಮ್ಮ ಸಾಂಸ್ಕೃತಿಕ ಐಡೆಂಟಿಟಿ ಕಂಡುಕೊಳ್ಳಲು ಬಯಸಿ, ಜನ್ಮದಿನೋತ್ಸವ ಆಚರಿಸಿದರು.

ಟಿಪ್ಪುವನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕೆಂದು ಕೆಲವರು ತಕರಾರೆತ್ತಿ, ಅವರ ಆಯ್ಕೆಸ್ವಾತಂತ್ರ್ಯ ಹತ್ತಿಕ್ಕಲು ಪ್ರಯತ್ನಿಸಿದರು'. `ಟಿಪ್ಪುವನ್ನೇಕೆ ವೈಭವೀಕರಿಸುತ್ತೀರಿ, ಹಬ್ಬ ಯಾಕೆ ಆಚರಿಸುವಿರಿ, ನಿಮ್ಮ ಅಡುಗೆ ಮನೆಯಲ್ಲಿ ಯಾವ ಮಾಂಸ ಬೇಯುತ್ತಿದೆ ಎಂಬುದನ್ನೆಲ್ಲ ಪ್ರಶ್ನಿಸಲಾಗುತ್ತಿದೆ.

ಈ ಮಾತನ್ನು ಯಾರು, ಯಾರಿಗೆ, ಯಾತಕ್ಕಾಗಿ ಕೇಳುತ್ತಿದ್ದಾರೆ ಎನ್ನುವು ದನ್ನು ಪೂರ್ವಾ-ಗ್ರಹರಹಿತ ವಾಗಿ ಚರ್ಚಿಸಿ ಉತ್ತರ ಕಂಡುಕೊಳ್ಳಬೇಕಿದೆ. ಹಾಗಾದರಷ್ಟೆ ಈ ನೆಲದ ಜನಪರ, ಜೀವಪರ ಬಹುರೂಪಿ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ'ಎಂದರು.

ಕೊನೆಯಲ್ಲಿ ಬೋಗಿ ಏರಿದ ದೇಮ: ಚಂಪಾ ಟೀಕೆ `ಕಲ್ಬುರ್ಗಿ ಹತ್ಯೆ ಸಂದರ್ಭ ಕೇಂದ್ರ ಸಾಹಿತ್ಯ ಅಕಾಡೆಮಿ ವರ್ತನೆ ಖಂಡಿಸಿ ನಡೆದ ಪ್ರಶಸ್ತಿ ವಾಪ್ಸಿ ಚಳವಳಿ ಸಂದರ್ಭ ಮೊಟ್ಟ ಮೊದಲಿಗರಾಗಿ ಪ್ರಶಸ್ತಿ ಹಿಂತಿರುಗಿಸಬೇಕಿದ್ದ ಹಿರಿಯ ಸಾಹಿತಿ ದೇವನೂರ ಮಹಾದೇವ ಕಟ್ಟ ಕಡೆಯರಾಗಿ ಪದ್ಮಶ್ರೀ ವಾಪಸ್ ಮಾಡಿದರು. ಒಂದರ್ಥದಲ್ಲಿ ಹೊರಟು ನಿಂತ ರೈಲಿನಲ್ಲಿ ಕೊನೆ ಯವರಾಗಿ ಬೋಗಿ ಏರಿದರು' ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಟೀಕಿಸಿದರು. `ಅಬಿsವ್ಯಕ್ತಿ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,`ಕಲಬುರ್ಗಿ ಹತ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ನಾನು ಪ್ರಶಸ್ತಿ ಹಿಂತಿರುಗಿಸಿದ ನಂತರ ಅನೇಕ ಟೀಕೆ ಟಿಪ್ಪಣಿಗಳು ಬಂದವು. ಹಲವು ಹಿರಿಯ ಸಾಹಿತಿಗಳು ಕಾಯ್ದು ನೋಡು-ವ ತಂತ್ರ ಅನುಸರಿಸಿದರು' ಎಂದರು.

ಕುವೆಂಪು ಕೂಡ: `ತುರ್ತು ಪರಿಸ್ಥಿತಿ ಸಂದರ್ಭ ಕಾರಂತರು ಕೇಂದ್ರ ನೀಡಿದ್ದ ಪ್ರಶಸ್ತಿ ಹಿಂತಿರುಗಿಸಿ ದ್ದರು. ಆಗ ಎಲ್ಲರ ಕಣ್ಣು ಕುವೆಂಪು ಮೇಲೆ ನೆಟ್ಟಿತ್ತು. ಆದರೆ, ಅವರು ಪ್ರಶಸ್ತಿ ಹಿಂತಿರುಗಿಸಲಿಲ್ಲ. ಕುವೆಂಪು ಪ್ರಶಸ್ತಿ ಹಿಂತಿರುಗಿಸಿದ್ದರೆ ಮತ್ತಷ್ಟು ದೊಡ್ಡವರಾಗುತ್ತಿದ್ದರು' ಎಂದರು.

SCROLL FOR NEXT