ಜಿಲ್ಲಾ ಸುದ್ದಿ

ನಮಗೆ ಸಂಶೋಧನೆಗೂ ಸಮಯವಿಲ್ಲ: ವಿಜ್ಞಾನಿ ಸಿಎನ್ಆರ್ ರಾವ್

Srinivas Rao BV

ಬೆಂಗಳೂರು: ಭಾರತೀಯರು ಸಂಶೋಧನೆಗಾಗಿ ಹೆಚ್ಚಿನ ಸಮಯವನ್ನು ಕಳೆಯುವುದಕ್ಕೆ ಮುಂದಾಗುತ್ತಿಲ್ಲ ಎಂದು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿಯ ಮುಖ್ಯಸ್ಥ, ವಿಜ್ಞಾನಿ ಭಾರತ ರತ್ನ ಪ್ರೊ.ಸಿಎನ್ ಆರ್ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್ ವತಿಯಿಂದ ನಗರದ ಜವಹಾರ್ ಲಾಲ್ ನೆಹರು ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ಪರಿಕ್ರಮ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೀನಾದಂತಹ ದೇಶಗಳಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಮಧ್ಯರಾತ್ರಿವರೆಗೂ ಸಂಶೋಧನೆಯಲ್ಲಿ ತೊಡಗುವ ಯುವಕರಿದ್ದಾರೆ. ಭಾರತೀಯರು ನಡೆಸುವ ಸಂಶೋಧನೆಗಳಿಂದ ಅತ್ಯುತ್ತಮ ಫಲಿತಾಂಶ ದೊರೆಯುತ್ತಿದೆಯಾದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ವಿಜ್ಞಾನಿಗಳು ಬಡವರು: ವಿಜ್ಞಾನ ಶ್ರೀಮಂತರಿಗೆ ಸೀಮಿತ ಎನ್ನುವ ಅಂಶ ಸತ್ಯಕ್ಕೆ ದೂರವಾದದ್ದು, ವಿಶ್ವದಲ್ಲಿ ಅತ್ಯುನ್ನತ ಸ್ಥಾನಕ್ಕೇರಿರುವ ಎಲ್ಲಾ ವಿಜ್ಞಾನಿಗಳು ಅತ್ಯಂತ ಕಡು ಬಡತನದ ಕುಟುಂಬದಿಂದ ಬಂದಿರುವುದು ಇದಕ್ಕೆ ಸಾಕ್ಷಿ ಎಂದರು. ಲ್ಯಾಬ್ ಸಹಾಯಕರು ಮತ್ತು ಲೆಕ್ಕ ಶಾಸ್ತ್ರಗಳಲ್ಲಿ ಪದವಿ ಪಡೆದವರು ಇಂದು ಅತ್ಯಂತ ಉನ್ನತ ಮಟ್ಟದ ವಿಜ್ಞಾನಿಗಳಾಗಿರುವ ಉದಾಹರಣೆಗಳಿದ್ದು, ವಿದ್ಯಾರ್ಥಿಗಳು ಗಂಭೀರವಾಗಿ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.   

SCROLL FOR NEXT