ಡೇರಿ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ಸಿಎನ್ ಮಂಜುನಾಥ್ 
ಜಿಲ್ಲಾ ಸುದ್ದಿ

ಆಹಾರ ಪರೀಕ್ಷೆಗೆ ಪ್ರಾಧಿಕಾರ ಅಗತ್ಯ: ಡಾ.ಮಂಜುನಾಥ್ ಅಭಿಮತ

ಅಮೆರಿಕದಲ್ಲಿರುವಂತೆ ಭಾರತದಲ್ಲೂ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸುವ ಪ್ರಾಧಿಕಾರಗಳು ರಚನೆಯಾಗಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಹೇಳಿದರು.

ಬೆಂಗಳೂರು: ಅಮೆರಿಕದಲ್ಲಿರುವಂತೆ ಭಾರತದಲ್ಲೂ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸುವ ಪ್ರಾಧಿಕಾರಗಳು ರಚನೆಯಾಗಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಹೇಳಿದರು.
ಬೆಂಗಳೂರು ಡೇರಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 51 ನೇ ಡೇರಿ ಡೇ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಆರೋಗ್ಯಕ್ಕಾಗಿ ಹಾಲು ಬಗ್ಗೆ ಅವರು ಮಾತನಾಡಿ, ನಾವು ಆಹಾರ ರೂಪದಲ್ಲಿ ವಿಷ ಸೇವಿಸುತ್ತಿದ್ದೇವೆ. ಆಹಾರದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ತಳಮಟ್ಟದ ಚಿಂತನೆ ಆಗಬೇಕಿದೆ. ಆಹಾರ ವಿಜ್ಞಾನದ ತಂತ್ರಜ್ಞರು ವಿಜ್ಞಾನಿಗಳು ಪರೀಕ್ಷೆ ನಡೆಸುವ ಪ್ರಾಧಿಕಾರಗಳ ಅಗತ್ಯವಿದೆ ಎಂದರು.
ಪ್ರಕೃತಿಯಲ್ಲಿ ಸೂರ್ಯ, ಆಹಾರ, ವ್ಯಾಯಾಮ, ಮರ-ಗಿಡಗಳೆಂಬ ಐವರು ಉತ್ತಮ ವೈದ್ಯರಿದ್ದಾರೆ. ಇಂದು ಸೂರ್ಯ ನೆತ್ತಿಗೆ ಬರುವ ಮುನ್ನವೇ ನಾವು ಬಹುಮಹಡಿ ಕಟ್ಟಡದ ಒಳಗೆ ಸೇರಿಕೊಳ್ಳುತ್ತೇವೆ. ಮುಳುಗಿದ ನಂತರ ಹೊರ ಬರುತ್ತೇವೆ. ಇದರಿಂದ ಶೇ.80 ಜನ ವಿಟಮಿನ್ ಡಿ ಕೊರತೆ ಎದುರಿಸುತ್ತಿದ್ದು, ಪಟ್ಟಣ ನಿವಾಸಿಗಳಲ್ಲಿ ಈ ಕೊರತೆ ಹೆಚ್ಚಾಗಿದೆ. ಯುವಜನರಲ್ಲಿ ಶೇ.60 ರಷ್ಟು ವಿಟಮಿನ್ ಡಿ ಕೊರತೆ ಇದೆ. ಸಾಂಕ್ರಾಮಿಕವಲ್ಲದ ರೋಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ದೇಶದಲ್ಲಿ ಶೇ.50 ರಷ್ಟು ಸಾವು ಈ ರೋಗಗಳಿಂದಾದರೆ ಶೇ.25 ರಷ್ಟು ಹೃದಯ ಕಾಯಿಲೆಗಳಿಂದ ಆಗುತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ