ಕೆಎಸ್ ಆರ್ ಟಿಸಿಗೆ ಪ್ರಶಸ್ತಿ 
ಜಿಲ್ಲಾ ಸುದ್ದಿ

ಕೆಎಸ್ ಆರ್ ಟಿಸಿಗೆ ಪ್ರಶಸ್ತಿ

ಸಾರ್ವಜನಿಕ ಸಂಪರ್ಕ ಮಂಡಳಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಂಸ್ಥೆಗಳು ಸಲ್ಲಿಸಿರುವ ಕೊಡುಗೆ ಗುರುತಿಸಿ ಕೊಡಮಾಡುವ ಕಾರ್ಪೊರೇಟ್ ಕೊಲ್ಯಾಟರಲ್ ಪ್ರಶಸ್ತಿಗೆ ಕೆಎಸ್ಆರ್ ಟಿಸಿ ಪಾತ್ರವಾಗಿದೆ.

ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಂಸ್ಥೆಗಳು ಸಲ್ಲಿಸಿರುವ ಕೊಡುಗೆಗಳನ್ನು ಗುರುತಿಸಿ ಕೊಡಮಾಡುವ ಕಾರ್ಪೊರೇಟ್ ಕೊಲ್ಯಾಟರಲ್ ಪ್ರಶಸ್ತಿಗೆ ಕೆಎಸ್ಆರ್ ಟಿಸಿ ಪಾತ್ರವಾಗಿದೆ. ರಾಷ್ಟ್ರಮಟ್ಟದಲ್ಲಿ ಸಂವಹನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ನೀಡುವ ಚಾಣಕ್ಯ ಪ್ರಶಸ್ತಿಯನ್ನು ಬೆಸ್ಟ್ ಪಿಆರ್ ಅಂಡ್ ಕಾರ್ಪೊರೆಟ್ ಕಮ್ಯುನಿಕೇಷನ್ ಆಫ್ ದಿ ಇಯರ್ ವರ್ಗದಲ್ಲಿ ಕೆಎಸ್ಆರ್ ಟಿಸಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿಎಸ್ ಲತಾ ಅವರಿಗೆ ನೀಡಿ ಗೌರವಿಸಿದೆ.
ಕೋಲ್ಕತಾದಲ್ಲಿ ನಡೆದ 10 ನೇ ವಿಶ್ವ ಸಾರ್ವಜನಿಕ ಸಂವಹನ ಸಮ್ಮೇಳನದಲ್ಲಿ ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಸಚಿವೆ ಶಶಿ ಪಂಜಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇನ್ನೂ 5 ವರ್ಗಗಳಲ್ಲಿ ನೀಡುವ ಪ್ರಶಸ್ತಿಯನ್ನು ಕೆಎಸ್ ಆರ್ ಟಿಸಿಯ ಆಂತರಿಕ ನಿಯತಕಾಲಿಕ, ಕಾರ್ಪೊರೇಟ್ ಜಾಹಿರಾತು, ಬಯೋ ಬಸ್ ನ ಸಾಕ್ಷಚಿತ್ರ, ಬಯೋಬಸ್ ಕೈಪಿಡಿ ಮತ್ತು ಐರಾವತ ಡೈಮಂಡ್ ಕ್ಲಾಸ್ ಬಸ್ ಗಳ ಬ್ರ್ಯಾಂಡಿಂಗ್ ಕಾರ್ಯಗಳಿಗೆ ಲಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!