ಜಿಲ್ಲಾ ಸುದ್ದಿ

ಗಣರಾಜ್ಯೋತ್ಸವ ಹಿನ್ನೆಲೆ: ಸನ್ನಡತೆ ಆಧಾರದ ಮೇಲೆ 375 ಖೈದಿಗಳ ಬಿಡುಗಡೆಗೆ ನಿರ್ಧಾರ

Shilpa D

ಬೆಂಗಳೂರು:  ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 375 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸದ್ಯದಲ್ಲಿಯೇ ರಾಜ್ಯಪಾಲರಿಗೆ ಶಿಫಾರಸು ಕಡತ ರವಾನೆಯಾಗಲಿದೆ. 14 ವರ್ಷಕ್ಕೂ ಮೇಲ್ಪಟ್ಟು ಸಜೆ ಅನುಭವಿಸಿದ ಮಾಫಿ ರಹಿತ 120 ಖೈದಿಗಳನ್ನು ಬಿಡುಗಡೆಗೆ ನಿರ್ಧರಿಸಲಾಗಿದೆ. ಇದರ ಜೊತೆಗೆ ಮಾಫಿ ಸಹಿತ 255 ಖೈದಿಗಳು ಸಹ ಬಿಡುಗಡೆಯಾಗಲಿದ್ದಾರೆ. ಇದರಲ್ಲಿ 11 ಮಂದಿ ಮಹಿಳೆಯರಿದ್ದಾರೆ.

ಬೆಂಗಳೂರಿನಲ್ಲಿ 90, ವಿಜಯಾಪುರದಲ್ಲಿ 38, ಬೆಳಗಾವಿಯಲ್ಲಿ 114, ಧಾರವಾಡ 10, ಮೈಸೂರು 42, ಕಲ್ಬುರ್ಗಿ 50, ಬಳ್ಳಾರಿ ಕಾರಾಗೃಹದಲ್ಲಿರುವ 23 ಖೈದಿಗಳು ಈ ಪಟ್ಟಿಯಲ್ಲಿ ಸೇರಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು , ಇದಕ್ಕೆ ರಾಜ್ಯಪಾಲರ ಅಂಕಿತ ದೊರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

SCROLL FOR NEXT