ಜಿಲ್ಲಾ ಸುದ್ದಿ

ರಾಜಪಥದಲ್ಲಿ ಕೊಡಗು ಕಾಫಿ ಘಮ !

Shilpa D

ಮಡಿಕೇರಿ/ನವದೆಹಲಿ: ಗಣ ರಾಜ್ಯೋತ್ಸವ ಪಥ ಸಂಚಲನದಲ್ಲಿ  ಕರ್ನಾಟಕವನ್ನು ಪ್ರತಿನಿಧಿಸಿರುವ ಕೊಡಗು ಕಾಫಿನಾಡು ಸ್ತಬ್ಧ ಚಿತ್ರ ಪ್ರೇಕ್ಷಕರ ಮನ ಸೆಳೆಯಿತು. ನೆರೆದಿದ್ದ ಸಾವಿರಾರು ಪ್ರೇಕ್ಷಕರಿಂದ ಚಪ್ಪಾಳೆಯ ಸ್ವಾಗತ ಪಡೆಯಿತು.

ಸ್ತಬ್ಧ ಚಿತ್ರದಲ್ಲಿ  ಕಾಫಿ ಬೀಜ ಬಿತ್ತನೆ, ಕಾಫಿ ಬೆಳೆಯುವುದು, ಕಾಫಿ ಕೊಯ್ಲು, ಕಾಫಿ ಪುಡಿ ತಯಾರಿಕೆ , ಕಾಫಿ ಬೀಜ ಸಂಸ್ಕರಣೆ ಹೀಗೆ ಕಾಫಿ ಉತ್ಪಾದನೆಯ ವಿವಿಧ ಹಂತಗಳು ಅನಾವರಣಗೊಂಡವು. ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಕಾಫಿ ಬೆರೆಸುತ್ತಿರುವ ದೃಶ್ಯವನ್ನು ಆಕರ್ಷಕವಾಗಿ ಮಾಡಲಾಗಿತ್ತು.

ಸ್ತಬ್ಧ ಚಿತ್ರದ ಮುಂಭಾಗ ಕೊಡಗಿನ 8 ಮಹಿಳೆಯರು ಮತ್ತು ಇಬ್ಬರು ಪುರುಷರು ಸಾಂಪ್ರಾದಾಯಿಕ ಕೊಡವ ದಿರಿಸಿನಲ್ಲಿ ಸಾಂಪ್ರದಾಯಿಕ ನೃತ್ಯದ ಮೂಲಕ ಸ್ತಬ್ಧ ಚಿತ್ರಕ್ಕೆ ಮತ್ತಷ್ಟು ಮೆರೆಗು ನೀಡಿದರು. ಕೊಡಗು ಮತ್ತು ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ಹಾಡಿ ಹೊಗಳುವ ಹಾಡು ಸಂಗೀತ ಕೇಳಿ ಬಂದವು.

ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ ಸೇರಿದಂತೆ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತ ಪಡಿಸಿದರು.

ಕಾಫಿ ಘಮ ಘಮ,,! ಸ್ತಬ್ದ ಚಿತ್ರ ಸಾಗುವ ವೇಳೆ ಕಾಫಿಯ ಸುಗಂದವನ್ನು ಪ್ರೇಕ್ಷಕರಿಗೆ  ತಲುಪಿಸಲು ಬೃಹತ್ ಗಾತ್ರದ ಗ್ಯಾಸ್ ಕಂಟೇನರ್ ಮೂಲಕ ಕಾಫಿಯ ಪರಿಮಳ ಸೂಸುವ ವ್ಯವಸ್ಥೆ ಮಾಡಲಾಗಿತ್ತು. ಆ ಮೂಲಕ ಕೊಡಗಿನ ಕಾಫಿ ಪರಿಮಳ ದೆಹಲಿಯ ರಾಜಪಥದಲ್ಲಿ  ಪಸರಿಸಿತು. ಸಾಮಾಜಿಕ ಜಾಲತಾಣಗಳಲ್ಲಿಯೂ ಸ್ತಬ್ದ ಚಿತ್ರದಲ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.  

SCROLL FOR NEXT