ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ನವಜಾತ ಶಿಶು ಕದ್ದು ಬಂಧನಕ್ಕೊಳಗಾಗಿದ್ದ ಮಹಿಳೆ ಜೈಲಿನಲ್ಲೇ ಆತ್ಮಹತ್ಯೆ

ನವಜಾತ ಶಿಶು ಕದ್ದು ಬಂಧನಕ್ಕೊಳಗಾಗಿದ್ದ ಮಹಿಳೆ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ....

ಧಾರವಾಡ:  ನವಜಾತ ಶಿಶು ಕದ್ದು ಬಂಧನಕ್ಕೊಳಗಾಗಿದ್ದ ಮಹಿಳೆ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಸುರೇಖಾ ಧಾರವಾಡ ಸಬ್ ಜೈಲಿನಲ್ಲಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೌಚಾಲಯದಲ್ಲಿ ವೇಲ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆಕೆ ಸಾವಿಗೆ ಶರಣಾಗಿದ್ದಾರೆ.

ಮೂರು ದಿನಗಳ ಹಿಂದಷ್ಟೆ ವೈದ್ಯೆಯ ವೇಷದಲ್ಲಿ ಕಿಮ್ಸ್‌ಗೆ ಬಂದಿದ್ದ ಮಹಿಳೆ ಶಿಶು ಕಳವು ಮಾಡಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ವಿದ್ಯಾನಗರ ಪೊಲೀಸರು ಮಂಗಳವಾರ ಆಕೆಯನ್ನು ಬಂಧಿಸಿದ್ದರು. ಕಳೆದ 2 ವರ್ಷಗಳಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದ ಮಗು ಅಪಹರಣದ ಮೂರನೇ ಪ್ರಕರಣ ಇದಾಗಿದೆ.

ಹಾವೇರಿಯ ಹತ್ತಿ ಮಿಲ್‌ನಲ್ಲಿ ಕೆಲಸ ಮಾಡುವ, ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ನರಸರಾವ್‌ಪೇಟೆಯ ಶ್ರೀನಿವಾಸ ಮತ್ತು ಅನಿತಾ ದಂಪತಿಯ 11 ದಿನಗಳ ಹೆಣ್ಣು ಶಿಶು ಕಳೆದ ಸೋಮವಾರ ಕಳ್ಳತನವಾಗಿತ್ತು.

ನಾಲ್ಕು ವರ್ಷದ ಹಿಂದೆ ವಿವಾಹವಾಗಿರುವ ಅವರಿಗೆ ಎರಡು ವರ್ಷದ ಗಂಡು ಮಗುವಿದೆ. ಎರಡನೇ ಹೆರಿಗೆಗೆಂದು ಪತ್ನಿ ಅನಿತಾರನ್ನು ಜ. 15ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಮರುದಿನ ಹೆಣ್ಣು ಮಗು ಜನಿಸಿತ್ತು.

ತನ್ನನ್ನು ವೈದ್ಯೆ ಎಂದು ಪರಿಚಯಿಸಿಕೊಂಡಿದ್ದ 35ರಿಂದ 40 ವರ್ಷ ವಯಸ್ಸಿನ ಮಹಿಳೆ ಈ ದಂಪತಿಯೊಂದಿಗೆ ತುಂಬಾ ಆತ್ಮೀಯತೆಯಿಂದ ಇದ್ದಳು. ಮಧ್ಯಾಹ್ನ ಅನಿತಾ ಇದ್ದ ಕೊಠಡಿಗೆ ಬಂದಿದ್ದಳು. ಅಲ್ಲಿ ಅನಿತಾರ ತಾಯಿ ಗಂಗಮ್ಮ ಕೂಡ ಇದ್ದರು. ''ಮಗುವಿನ ಹಣೆ ಕೆಂಪಗಾಗಿದೆ, ಇಂಜೆಕ್ಷನ್ ಕೊಡಬೇಕು. ಅಜ್ಜಿ ಜತೆ ಮಗುವನ್ನು ಕಳಿಸಿ. ನೀವು ಇಲ್ಲೇ ಇರಿ,'' ಎಂದು ಹೇಳಿ ಕಾರ್ಡಿಯಾಲಜಿ ಕ್ಯಾತ್‌ಲ್ಯಾಬ್‌ಗೆ ಕರೆ ತಂದಿದ್ದಾಳೆ. ಒಳಹೋದ ಬಳಿಕ, ಅಜ್ಜಿಗೆ ಬಟ್ಟೆಯೊಂದನ್ನು ಕೊಟ್ಟು ''ತೊಳೆದುಕೊಂಡು ಬನ್ನಿ,'' ಎಂದು ಹೇಳಿದ್ದಾಳೆ. ಅಜ್ಜಿ ಆಚೆ ಹೋಗುತ್ತಿದ್ದಂತೆಯೇ ಮಗುವಿನೊಂದಿಗೆ ಪರಾರಿಯಾಗಿದ್ದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT