ಬೆಂಗಳೂರು: ಭಾರಿ ಗೊಂದಲದ ಜೊತೆಗೆ ತೀವ್ರ ವಿರೋಧಕ್ಕೂ ಕಾರಣವಾಗಿದ್ದ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಹಾಗೂ ಗೂಡ್ಸ್ ಲಾರಿಗಳ ಬೆಂಗಳೂರು ನಗರ ಪ್ರವೇಶ ನಿರ್ಬಂಧ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಇನ್ವೆಸ್ಟ್ ಕರ್ನಾಟಕ ನಡೆಯುವ ಐದು ದಿನ ಮಾತ್ರ ಖಾಸಗಿ ಬಸ್ ಮತ್ತು ಗೂಡ್ಸ್ ವಾಹನಗಳ ಸಂಚಾರಕ್ಕೆ ನಿಷೇಧವಿರುತ್ತದೆ. ಆದರೆ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಇದು ಅನ್ವಯವಾಗುವುದಿಲ್ಲ.
ನಗರದೊಳಕ್ಕೆ ಖಾಸಗಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಗಳು ಹಾಗೂ ಆಲ್ ಇಂಡಿಯಾ ಪರ್ಮಿಟ್ ಬಸ್ ಗಳ ಪ್ರವೇಶವನ್ನು ಫೇ.1ರಿಂದ 5ರವರೆಗೆ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ನಿಷೇಧಿಸಿ ಪೊಲೀಸ್ ಇಲಾಖೆ ಹೊರಡಿಸಿದೆ.