ಬಾದಾಮಿ: ಈದ್ ಮಿಲಾದ್ ಪ್ರಯುಕ್ತ ಸ್ಥಳೀಯ ಮುಸ್ಲಿಂ ಬಾಂಧವರು ಶುಕ್ರವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಇಲ್ಲಿನ ಜಾಮೀಯಾ ಮಸೀದಿಯಿಂದ ಆರಂಭವಾದ ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಜುಮನ್ ಇಸ್ಲಾಂ ಕಟ್ಟಿ ಹತ್ತಿರ ಮುಕ್ತಾಯಗೊಂಡಿತು. ಅಬ್ದುಲ್ರೆಹಮಾನ ಸಾಹುಕಾರ, ಲಾಯಕಕಲಿ ಸೈಯದಲಿ, ಇರ್ಫಾನ್ ಓಂಟಿ, ರಿಯಾಜ ದೊಡಮನಿ, ಮಹಮ್ಮದಲಿ ಅತ್ತಾರ, ಎಚ್.ಎಂ. ಬಾಗವಾನ, ಇಮಾಮಸಾಬ ಸಂದಿಮನಿ, ಅಮೀನಸಾಬ ಕಾಗಿಮರಿ, ಉತಾಲಸಾಬ ಬಾಗವಾನ, ನೂರಸಾಬ ಕಾರಬ್ಯಾಳಿ, ಹಸನಸಾಬ ಚೌದರಿ, ಸಲೀಂ ಬಾಗಲಕೋಟೆ ರ್ಯಾಲಿ ನೇತೃತ್ವ ವಹಿಸಿದ್ದರು.