ಬಾಗಲಕೋಟೆ

ಅಂಬಿಗರ ಚೌಡಯ್ಯ ದಿನಾಚರಣೆ

ಕೂಡಲಸಂಗಮ: ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈಚೇಗೆ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಕೆ.ಎಸ್ ಜಾಲಿಗಿಡದ ಮಾತನಾಡಿ ಬಸವಣ್ಣನವರ ಸಮಕಾಲಿನ ಶರಣರಲ್ಲಿ ಅಂಬಿಗರ ಚೌಡಯ್ಯ 12 ನೇ ಶತಮಾನದಲ್ಲಿ ಶೋಷಿತರ ಮೇಲೆ ನಿರಂತರವಾಗಿ ನೆಡೆಯುತ್ತಿದ್ದ ಹಲ್ಲೆಗಳನ್ನು ನಿಯಂತ್ರಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಅಂತಯೇ ಬಸವಣ್ಣ ಅಂಬಿಗರ ಮೇಲೆ ವಿಶ್ವಾಸ ವಿಟ್ಟು ಆತನನ್ನು ಸಮಾನವಾಗಿ ಕಾಣುತ್ತಿದ್ದರು ಅಂತಹ ಮಹಾಪುರಷರ ಆದರ್ಶ ತತ್ವಗಳನ್ನು ಸಮಾಜದವರು ಜೀವನದಲ್ಲಿ ಅಳವಡಿಸಿಕೊಂಡಾಗ ನಾವಲ್ಲೆರು ಒಂದು ಎನ್ನುವ ಭಾವನೆ ಬರಬಹುದು ಎಂದು ಹೇಳಿದರು.  
ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದ ಸಮಾಜದ ಮುಖಂಡ ಶಿವಪ್ಪ ಅಂಬಿಗೇರ ಮಾತನಾಡಿ ಸಮಾಜ ಬಾಂದವರು ಒಗ್ಗಾಟ್ಟಾಗಿದ್ದರೆ ಅತಿ ಹಿಂದುಳಿದ ಸಮಾಜ ಎಂದು ಗುರುತಿಸಿಕೊಂಡಿರಿವ ಅಂಬಿಗ ಸಮುದಾಯದವರು ಸರ್ಕಾರದ ಸಹಾಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು, ಈ ನಿಟ್ಟಿನಲ್ಲಿ ಸಮಾಜ ಬಾಂದವರು ಒಗ್ಗಾಟ್ಟಾಗುವುದು ಅವಶ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗಣ್ಣ ಬಳಗಾನೂರ, ಬಸಪ್ಪ ಅಂಬಿಗೇರ,ಶಿವಪ್ಪ ಕಟ್ಟಿಮನಿ ,ಸಂಗಪ್ಪ ಕರನಾಲಗಿ, ಹನಮಂತ ವಾಲಿಕಾರ,  ಹಾಗೂ ಮುದಿಯಪ್ಪ ಅಂಬಿಗೇರ,ಎಸ್.ಬಿ.ಅಂಬಿಗೇರ  ಶಂಕ್ರಪ್ಪ ಅಂಬಿಗೇರ ಭಾಗವಹಿಸಿದ್ದರು. ಇದೆ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ  ಶಾಲಾ ಮಕ್ಕಳಿಗೆ ಹಣ್ಣು ಹಂಪಲಗಳನ್ನು ವಿತರಿಸಿದರು. ಸಿ. ಎಸ್.ಕನ್ನೂರ ಸ್ವಾಗತಿಸಿದರು,  ಎಸ್. ಪಿ. ತುಂಬಿಗಿ ನಿರೂಪಿಸಿದರು. ಎಮ್.ಸಿ. ನಾಗಯ್ಯನವರ ವಂದಿಸಿದರು. ಶಾಲೆಯ ಎಲ್ಲ ಶಿಕ್ಷಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!