ಹೊಸಕೋಟೆ: ತಾಲೂಕಿನ ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಪ್ಜಯ್ಯಣ್ಣ ಮಾತನಾಡಿ, ಕಂದಾಯ ವಸೂಲಾತಿಯಲ್ಲಿ ಶೇ.3 ರಷ್ಟನ್ನು ಅಂಗವಿಕಲರಿಗೆ ಮೀಸಲಿಡಲಾಗಿದೆ. 10 ಗ್ರಾಮಗಳ ಸದಸ್ಯರು ಆಯ್ಕೆ ಮಾಡಿದ 25 ಅಂಗವಿಕಲರಿಗೆ ತಲಾ 10 ಸಾವಿರದಂತೆ 2.50 ಲಕ್ಷ ವಿತರಿಸಲಾಗುತ್ತಿದೆ. ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಪಿಡಿಓ ರಾಜಣ್ಣ ಮಾತನಾಡಿ, 2012-13ರ ಕ್ರಿಯಾಯೋಜನೆಯಲ್ಲಿ ಹಣ ಮೀಸಲಿಡಲಾಗಿದೆ ಎಂದರು. ಪ್ರತಿವರ್ಷ ಕಂದಾಯ ವಸೂಲಾತಿಯಲ್ಲಿ ಮೀಸಲಿಟ್ಟಿರುವ ಹಣ ಅರ್ಹರನ್ನು ಗುರುತಿಸಿ ನೀಡಲಾಗುವುದು ಎಂದರು.