ಬೆಂಗಳೂರು ಗ್ರಾಮಾಂತರ

'ನೌಕರರನ್ನು ಕಾಯಂಗೊಳಿಸಿ'


ಆನೇಕಲ್: ರಾಜ್ಯಾದ್ಯಂತ ಸುಮಾರು 94 ತ್ವರಿತ ಪಥ ನ್ಯಾಯಾಲಯಗಳಲ್ಲಿ ಅಂದಾಜು 170 ನೌಕರರು ಸತತ 10 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿದ್ದು ಈ ಕೂಡಲೆ ಕಾಯಂ ಮಾಡಬೇಕೆಂದು ನ್ಯಾಯಾಂಗ ನೌಕರರ ಸಂಘದ ಸತೀಶ್ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಅವರು ಆನೇಕಲ್ ನ್ಯಾಯಾಲಯದ ನೌಕರರ ಸಂಘದ ಸಭೆ ನಂತರ ಮಾತನಾಡಿ ಕೇಂದ್ರ ಸರ್ಕಾರದ ಅನುದಾನ ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿ ತ್ವರಿತ ಪಥ ನ್ಯಾಯಾಲಯಗಳು ಕೆಲಸ ನಿರ್ವಹಿಸುತ್ತಿದ್ದು ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸ್ಟೆನೋಗ್ರಾಫರ್, ಬೆರಳಚ್ಚುಗಾರರು, ಜವಾನರು ಮತ್ತು ವಾಹನ ಚಾಲಕರು ಸೇರಿದಂತೆ 170ಕ್ಕೂ ಹೆಚ್ಚು ಜನ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆಯೂ ಸಂಘದ ವತಿಯಿಂದ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಧೀಶರು ಹಾಗೂ ಸರ್ಕಾರಕ್ಕೆ ನೌಕರರ ಕಾಯಮಾತಿ ಬಗ್ಗೆ ನೌಕರರ ಸಂಘದ ಮೂಲಕ ಹಲವಾರು ಮನವಿಗಳನ್ನು ಸಲ್ಲಿಸಲಾಗಿದೆ. ನೌಕರರ ನೋವನ್ನು ಆಲಿಸಲು ವಿಳಂಬವಾದ ಕಾರಣ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿ ತೀರ್ಪು ನೌಕರರ ಪರವಾಗಿ ಮೂಡಿ ಬಂದಿದೆ. 11.2.2010ರಲ್ಲಿ ಬಂದ ಆದೇಶ ಹಾಗೂ ಸರ್ಕಾರದ ಕಾರ್ಯದರ್ಶಿ ಮತ್ತು ಮಾನವ ಹಕ್ಕುಗಳ ಇಲಾಖೆಯ ಕಾರ್ಯದರ್ಶಿಯವರು ಉಚ್ಚನ್ಯಾಯಾಲಯದ ರಿಜಿಸ್ಟ್ರಾರ್ ಅವರಿಗೆ ಪರಿಗಣಿಸುವಂತೆ ತಿಳಿಸಿದ್ದಾರೆ. ದೇಶದ ಇತರ ರಾಜ್ಯಗಳಾದ ಮಧ್ಯಪ್ರದೇಶ, ಜಾರ್ಖಡ್, ಒರಿಸ್ಸಾ, ಸಿಕ್ಕಿಂ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ತ್ವರಿತ ಪಥ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರನ್ನು ಕಾಯಂ ಮಾಡಿದೆ.  ಈ ಆದೇಶವನ್ನು ಪುನರ್ಪರಿಶೀಲಿಸಿ ನೌಕರರನ್ನು ಕಾಯಂ ಮಾಡಲು ಸ್ಪಷ್ಟ ಆದೇಶ ನೀಡಿದ್ದು ಈ ಕೂಡಲೇ  ಸರ್ಕಾರದ ಕಾನೂನು ಕಾರ್ಯದರ್ಶಿಯವರು ತ್ವರಿತ ಪಥ ನ್ಯಾಯಾಲಯದ ನೌಕರರ ಸೇವೆಯನ್ನು ನ್ಯಾಯಾಂಗ ಇಲಾಖೆ ನೌಕರರಂತೆ ಪರಗಣಿಸಲು ಆದೇಶ ಮಾಡಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ 20 ಜಿಲ್ಲಾ ಸತ್ರ ಅಧೀನ ನ್ಯಾಯಾಲಯಗಳು ಪ್ರಾರಂಭವಾಗುತ್ತಿದ್ದು ಹಾಲಿ 170 ನೌಕರರನ್ನು ಸೇವಾ ಜೇಷ್ಠತೆ, ಅನುಭವ, ಅರ್ಹತೆ, ವಯೋವುತಿ   ಆಧಾರದ ಮೇಲೆ ಪರಿಗಣಿಸಲು ಒತ್ತಾಯಿಸಿದ್ದಾರೆ. ನ್ಯಾಯಾಲಯದ ನೌಕರರು ಜೊತೆಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!