ಕೆಜಿಎಫ್: ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದ ಬಾಲಕಿಯೊಬ್ಬಳಿಗೆ ಕೈ-ಕಾಲು ಕಟ್ಟಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೇತಮಂಗಲ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ನ್ಯೂ ಟೌನ್ ಬಡಾವಣೆಯ ಮುನಿರಾಜು ಎಂಬವರ ಪುತ್ರಿ, 11 ವರ್ಷದ (6ನೇ ತರಗತಿ) ಬಾಲಕಿಯೇ ಅತ್ಯಾಚಾರಕ್ಕೀಡಾದವಳು. ಪಕ್ಕದ ಮನೆಯ ಕಿಟ್ಟಪ್ಪ ಎಂಬವರ ಪುತ್ರ ಲೋಕೇಶ್ ಅತ್ಯಾಚಾರವೆಸಗಿದ ಆರೋಪಿ. ಬಾಲಕಿ ಬಾಯಿಗೆ ಬಟ್ಟೆ ತುರಿಕಿ, ಆಕೆಯನ್ನು ಎತ್ತಿಕೊಂಡು ಮನೆಯೊಳಗೆ ಕೈ-ಕಾಲು ಕಟ್ಟಿ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಮುನಿರಾಜು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.