ಬೆಂಗಳೂರು ನಗರ

ರಾತ್ರಿ ಮಗು ಮಲಗಿಸಿ ದಂಪತಿ ನೇಣಿಗೆ

ಬೆಂಗಳೂರು: ರಾತ್ರಿ ಕೈತುತ್ತು ತಿನಿಸಿ, ಜೋಗುಳ ಹಾಡಿ ಮಲಗಿಸಿದ್ದ ಪೋಷಕರು ಬೆಳಗಾಗುವುದರೊಳಗೆ ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಅರಿಯದ ವಯಸ್ಸದು. ಬೆಳಗ್ಗೆ ಎಚ್ಚರಗೊಂಡಾಗ ಅಪ್ಪ-ಅಮ್ಮ ನೇತಾಡುತ್ತಿದ್ದುದನ್ನು ನೋಡಿದೆ ಅಷ್ಟೇ. ಅವರನ್ನು ಮಾತನಾಡಿಸಿದರೂ ಸದ್ದುಗದ್ದಲವಿಲ್ಲ. ಮಗುವಿನ ಬೇಕುಬೇಡಗಳಿಗೆ ಉತ್ತರವಿಲ್ಲ. ಅವರ ಆ ಸ್ಥಿತಿ ಅರಿಯದ ಮಗು ಮೃತದೇಹಗಳ ಕಾಲು ಹಿಡಿದು ಒಂದೇ ಸಮನೆ ಅಳುತ್ತಿತ್ತು.
ಇದು ಯಾವುದೇ ಚಲನಚಿತ್ರದ ದೃಶ್ಯವಲ್ಲ. ಮನಃಕಲಕುವ ಈ ಘಟನೆ ನಡೆದಿದ್ದು ನಮ್ಮದೇ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ.
ಕರುಳ ಕುಡಿಯನ್ನು ಮಲಗಿಸಿದ ದಂಪತಿ ನೇಣಿಗೆ ಶರಣಾಗಿದ್ದಾರೆ. ಸಂಪಿಗೆಹಳ್ಳಿ ಬಸವಲಿಂಗಪ್ಪ ಬಡಾವಣೆಯ ರಮೇಶ್(36) ಹಾಗೂ ಪುಷ್ಪ(26) ಆತ್ಮಹತ್ಯೆ ಮಾಡಿಕೊಂಡವರು. ಸಾಲಬಾಧೆ ಹಾಗೂ ಸಾಲಗಾರರ ಕಿರಿಕಿರಿಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ರಮೇಶ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಬಸವೇಶ್ವರನಗರ ಸಮೀಪದ ಕಮಲಾನಗರದಲ್ಲಿ ವಾಸಿಸುತ್ತಿದ್ದರು. ಸಾಲಗಾರರ ಕಾಟ ತಾಳದೆ ತಿಂಗಳ ಹಿಂದೆ ಸಂಪಿಗೆಹಳ್ಳಿಯ ಬಸವಲಿಂಗಪ್ಪ ಬಡಾವಣೆಗೆ ಬಂದಿದ್ದರು. ಆದರೆ, ಇಲ್ಲಿಯೂ ಅವರ ಮನೆಗೆ ಸಾಲಗಾರರು ಅಲೆಯುತ್ತಿದ್ದರು.
ಇದರಿಂದ ಬೇಸತ್ತ ದಂಪತಿ ಆತ್ಮಹತ್ಯೆಗೆ ನಿರ್ಧರಿಸಿದ್ದು, ಅವರ ಮೊದಲ ಪುತ್ರಿ ಮಮತಾ(5)ಳನ್ನು ರಮೇಶ್ ತಾಯಿ ಮನೆಗೆ ಬಿಟ್ಟುಬಂದಿದ್ದರು. 2ನೇ ಮಗಳು ಮಹದೇವಿ ಅಜ್ಜಿ ಮನೆಗೆ ಹೋಗಲು ನಿರಾಕರಿಸಿದ್ದರಿಂದ ಆಕೆಯನ್ನು ಜತೆಯಲ್ಲೇ ಕರೆದುಕೊಂಡು ಬಂದಿದ್ದರು.
ರಾತ್ರಿ ಮಗುವನ್ನು ಮಲಗಿಸಿ ಅವರು ನೇಣುಹಾಕಿಕೊಂಡಿದ್ದಾರೆ. ಬೆಳಗ್ಗೆ ಎಚ್ಚರಗೊಂಡ ಮಗು ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಅರಿಯದೆ ಅವರ ಕಾಲು ಹಿಡಿದು ಅಳುತ್ತಿತ್ತು.
ಬೆಳಗ್ಗೆ  ಆ ಕಡೆ ಬಂದ ಮನೆ ಮಾಲೀಕರು ಮಗು ಅಳುತ್ತಿದ್ದ ಸದ್ದು ಕೇಳಿ, ಬಾಗಿಲು ತಟ್ಟಿದ್ದಾರೆ. ನಂತರ ರಮೇಶ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದಾಗ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ಒಪ್ಪಿಸಿದ್ದು, ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!