ಬೆಂಗಳೂರು ನಗರ

ಅತಿ ಅರಿವಳಿಕೆಗೆ ಬಲಿಯಾದ ಅಭಿಷೇಕ್?

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಆಪರೇಷನ್ಗೆ ಮುನ್ನಾ ನೀಡುವ ಅನಸ್ತೇಷಿಯಾ ಚುಚ್ಚುಮದ್ದುಗಳು ರೋಗಿಗಳ ಪಾಲಿಗೆ ಸಾವಿನ ವಿಷವಾಗಿ ಪರಿವರ್ತನೆ ಆಗುತ್ತಿವೆ.

ಕ.ಪ್ರ.ವಾರ್ತೆ ಬೆಂಗಳೂರು ಮಾ.20-
ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಆಪರೇಷನ್ಗೆ ಮುನ್ನಾ ನೀಡುವ ಅನಸ್ತೇಷಿಯಾ ಚುಚ್ಚುಮದ್ದುಗಳು ರೋಗಿಗಳ ಪಾಲಿಗೆ ಸಾವಿನ ವಿಷವಾಗಿ ಪರಿವರ್ತನೆ ಆಗುತ್ತಿವೆ.
ಕೊಡಿಗೆಹಳ್ಳಿಯ ಪ್ರಥಮ ಪಿಯು ವಿದ್ಯಾರ್ಥಿ ಅಭಿಷೇಕ್ (16) ಎಂಬಾತ ಆಪರೇಷನ್ಗೆ ಮುನ್ನ ವೈದ್ಯರು ನೀಡಿದ ಅನಸ್ತೇಷಿಯಾ ಪ್ರಮಾಣ ಹೆಚ್ಚಾದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೊಡಿಗೆಹಳ್ಳಿಯ ಮರಿಯಣ್ಣನಪಾಳ್ಯ ನಿವಾಸಿ ತೋಟಗಾರಿಕೆ ಇಲಾಖೆ ಉದ್ಯೋಗಿ ರಮೇಶ ಅವರ ಪುತ್ರ ಅಭಿಷೇಕ್ ಮೃತ ವಿದ್ಯಾರ್ಥಿ. ಒಬ್ಬನೇ ಮಗನಾಗಿದ್ದ ಅಭಿಷೇಕ್ಗೆ ಎದೆ ಭಾಗ ಸಾಮಾನ್ಯಕ್ಕಿಂತ ಹೆಚ್ಚು (ಮಹಿಳೆಯರಂತೆ) ಬೆಳೆದಿತ್ತು. ಇದನ್ನು ಕಡಿಮೆಗೊಳಿಸಲು ಬಸವೇಶ್ವರ ನಗರದಲ್ಲಿರುವ ಪೆನಿಷಿಯಾ ಆಸ್ಪತ್ರೆಗೆ ಅಭಿಷೇಕ್ನನ್ನು ಪೋಷಕರು ದಾಖಲಿಸಿದ್ದರು. ಈ ಸಂಬಂಧ ಭಾನುವಾರ ಪೆನಿಷಿಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದರು.ಶಸ್ತ್ರಚಿಕಿತ್ಸೆಗೂ ಮುನ್ನ ಅನಸ್ತೇಷಿಯಾ ಚುಚ್ಚುಮದ್ದು ನೀಡಿದ್ದರು.
ಆದರೆ ಅಭಿಷೇಕ್ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ಮೂರ್ಛೆ ಹೋಗಿದ್ದಾನೆ ಎನ್ನಲಾಗಿದೆ. ಬಳಿಕ ಏನು ಮಾಡಬೇಕು ಎನ್ನುವುದರ ಬಗ್ಗೆ ಅರಿಯದ ವೈದ್ಯರು ಹೆಬ್ಬಾಳದಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ವೆಂಟಿಲೇಟರ್ ಸಮೇತ ವರ್ಗಾಯಿಸಿದ್ದಾರೆ. ಕೊಲಂಬಿಯಾ ಆಸ್ಪತ್ರೆಗೆ ಅಭಿಷೇಕ್ನನ್ನು ತಂದಾಗ, ಅಲ್ಲಿನ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸೇರಿಸಿ ಸೋಮವಾರ, ಮಂಗಳವಾರದವರೆಗೂ ವೆಂಟಿಲೇಟರ್ನಲ್ಲಿ ಇರಿಸಿದ್ದಾರೆ. ಶಸ್ತ್ರಚಿಕಿತ್ಸೆಯನ್ನು ಕೂಡ ನಡೆಸಿಲ್ಲ. ಅಭಿಷೇಕ್ಗೆ ಪ್ರಜ್ಞೆ ಬಾರದ ಹಿನ್ನೆಲೆಯಲ್ಲಿ ಸಂಬಂಧಿಗಳು ಆಸ್ಪತ್ರೆ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರಶ್ನೆ ಮಾಡಿದ್ದಾರೆ. ಪೋಷಕರ ಒತ್ತಡಕ್ಕೆ ಮಣಿದ ಕೊಲಂಬಿಯಾ ಏಷಿಯಾ ವೈದ್ಯರು ಅನಸ್ತೇಷಿಯಾ ಹೆಚ್ಚಳದಿಂದ ಅಭಿಷೇಕ್ ಮೆದುಳಿಗೆ ಹಾನಿಯಾಗಿ ಆತ ಬದುಕುವುದು ಕಷ್ಟ ಎಂದು ಹೇಳಿ ವೆಂಟಿಲೇಟರ್ ತೆಗೆದು ಅಭಿಷೇಕ್ ಸಾವನ್ನು ಖಚಿತಗೊಳಿಸಿದ್ದಾರೆ.
ಖಿನ್ನನಾಗಿದ್ದ ಅಭಿಷೇಕ್
ಅತಿ ಅಪರೂಪವಾಗಿ ಕಾಣಿಸುವ ಹೆಂಗಸರಂತೆ ಎದೆಯ ಬೆಳವಣಿಗೆ ಅಭಿಷೇಕ್ನಲ್ಲಿ ಕಂಡು ಬಂದಿತ್ತು. ಶಾಲೆ ಹಾಗೂ ಕಾಲೇಜ್ನಲ್ಲಿ ಅಭಿಷೇಕ್ನನ್ನು ಸ್ನೇಹಿತರು ಹಾಗೂ ಇತರರು ರೇಗಿಸುತ್ತಿದ್ದರು. ಹೀಗಾಗಿ ಖಿನ್ನನಾಗಿದ್ದ ಅಭಿಷೇಕ್ ಆಪರೇಷನ್ ಮಾಡಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ. ಇತ್ತೀಚೆಗೆ ಪ್ರಥಮ ಪಿಯು ಪರೀಕ್ಷೆ ಮುಗಿದ ಕಾರಣ ಆಪರೇಷನ್ ಮಾಡಿಸಿ ಎಂದು ಪೋಷಕರನ್ನು ಒತ್ತಾಯಿಸಿದ್ದ. ಹೀಗಾಗಿ ಪೋಷಕರು ಪೆನಿಷಿಯಾ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಅಭಿಷೇಕ್ ಸೋದರಮಾವ ಅನಂತಮೂರ್ತಿ ಕನ್ನಡಪ್ರಭಗೆ ತಿಳಿಸಿದ್ದಾರೆ.

ಎದೆ ಆಪರೇಷನ್ಗಾಗಿ ಪೆನಿಷಿಯಾ ವೈದ್ಯರು ನೀಡಿದ್ದ ಅನಸ್ತೇಷಿಯಾ ಓವರ್ಡೋಸ್ನಿಂದ ಅಭಿಷೇಕ್ ಸಾವು ಸಂಭವಿಸಿದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯರು ವರದಿ ನೀಡಿದ್ದಾರೆ.
- ಅನಂತಮೂರ್ತಿ, ಅಭಿಷೇಕ್ ಸೋದರಮಾವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!