ಕ.ಪ್ರ. ವಾರ್ತೆ ಬೆಂಗಳೂರು ಮಾ.21-
ಕೆನರಾ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಕಲ್ಯಾಣ ಸಂಘದ ಆಶ್ರಯದಲ್ಲಿ ಮಾ.20ರಿಂದ 24ರವರೆಗೆ ಕೆನರಾ ಉತ್ಸವ ಆಯೋಜಿಸಲಾಗಿದೆ. ಮಹಿಳಾ ಉದ್ಯಮಿಗಳಿಗಾಗಿಯೇ ಆಯೋಜಿಸಿರುವ 5 ದಿನದ ಕೆನರಾ ಉತ್ಸವಕ್ಕೆ ಚಿತ್ರ ನಟಿ ಮಾಳವಿಕಾ ಅವಿನಾಶ್ ಅವರು ಬುಧವಾರ ಚಾಲನೆ ನೀಡಿದರು. ನಗರದ 60ಕ್ಕೂ ಅಧಿಕ ಮಹಿಳಾ ಉದ್ಯಮಿಗಳು ಉತ್ಸವದಲ್ಲಿ ಭಾಗವಹಿಸಿದ್ದು, ತಮ್ಮ ಸಂಸ್ಥೆಯ ಉತ್ಪನ್ನಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ನ ಹಿರಿಯ ಅಧಿಕಾರಿಗಳಾದ ಎಸ್.ಎಸ್.ಭಟ್, ಪ್ರಕಾಶ್ ಪಿ.ಮಲ್ಯ, ಪ್ರೇಮಾ ರತ್ನಾಕರ್, ಪಿ.ಅರವಿಂದ್ ರಾವ್ ಹಾಗೂ ಸುಶೀಲಾ ಕೆ ಉಪಸ್ಥಿತರಿದ್ದರು.