ಬೆಂಗಳೂರು ನಗರ

ಮೆಟ್ರೊ ಹೆಸರಿಗೆ ಮಣ್ಣು

ಮೆಟ್ರೋ ರೈಲು ಕಾಮಗಾರಿಯಿಂದ ಮಾತ್ರ ನಗರವನ್ನು ಧೂಳು ಅವರಿಸಿಕೊಂಡಿದೆ.

ಕ.ಪ್ರ.ವಾರ್ತೆ ಬೆಂಗಳೂರು ಮಾ.23
ಮೆಟ್ರೋ ರೈಲು ಕಾಮಗಾರಿಯಿಂದ ಮಾತ್ರ ನಗರವನ್ನು ಧೂಳು ಅವರಿಸಿಕೊಂಡಿದೆ. ಇದರಿಂದ ವಾಯು ಮಾಲಿನ್ಯವಾಗುತ್ತಿದೆ ಎಂಬುದು ತಪ್ಪು. ಬದಲಾಗಿ ಖಾಸಗಿ ಕಟ್ಟಡಗಳ ಮಾಲೀಕರ ಪಾತ್ರವೂ ಇದರಲ್ಲಿದೆ.
ಹೌದು, ರಾತ್ರೋರಾತ್ರಿ ಕೆಡವಿದ ಕಟ್ಟಡಗಳ ಮಣ್ಣನ್ನು ತಂದು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ಸಮಸ್ಯೆಯಾಗುತ್ತಿದೆ.
ಆದರೆ, ಯಾರು ಈ ರೀತಿ ಮಣ್ಣು ಸುರಿಯುತ್ತಿದ್ದಾರೆ ಎಂಬುದು ಗೊತ್ತಿಲ್ಲ. ನಿರುಪಯುಕ್ತ ಮಣ್ಣನ್ನು ನಗರದ ಹೊರವಲಯದಲ್ಲಿ ಸುರಿಯದೆ ಸಾರ್ವಜನಿಕ ಸ್ಥಳದಲ್ಲಿ ಹಾಕುತ್ತಿರುವವರ ಬಗ್ಗೆ ಸಂಚಾರ ಪೊಲೀಸರೇನೋ ಕಣ್ಣಿಟ್ಟಿದ್ದಾರೆ. ಆದರೆ, ಪೊಲೀಸರ ಕಣ್ಣು ತಪ್ಪಿಸಿ ಕೆಲವರು ಆ ಕೆಲಸ ಮಾಡುತ್ತಿದ್ದಾರೆ.
ರಾತ್ರಿ ವೇಳೆ ತರುತ್ತಾರೆ: ಸಾಮಾನ್ಯವಾಗಿ ಹಗಲಿನಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವಾಗ ನಗರದ ಒಳಭಾಗದಲ್ಲಿ ಲಾರಿಗಳಿಗೆ ಪ್ರವೇಶವಿಲ್ಲ. ಈ ವೇಳೆ ಎಲ್ಲೆಡೆ ಪೊಲೀಸರು ಇರುತ್ತಾರೆ. ಆದ್ದರಿಂದ ರಾತ್ರಿ ವೇಳೆ ಮಣ್ಣನ್ನು ತಂದು ಸುರಿಯುತ್ತಿದ್ದಾರೆ ಎಂಬುದು ಮೆಟ್ರೊ ರೈಲು ನಿಗಮದ ಅಧಿಕಾರಿಗಳ ಆರೋಪ.
ಮಣ್ಣು ತಂದು ಸುರಿಯುತ್ತಿದ್ದವರ ವಿರುದ್ಧ ಇದುವರೆಗೆ 49 ಪ್ರಕರಣ ದಾಖಲು ಮಾಡಲಾಗಿದೆ. ಆದರೂ ಇಂತಹ ಕೆಲಸ ಮುಂದುವರೆದಿದೆ. ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಮಣ್ಣು ತಂದು ಸುರಿಯುವವರ ಮೇಲೆ ಕಣ್ಣಿಟ್ಟಿದ್ದಾರೆ. ಆದರೂ ಹಾವಳಿ ನಿಂತಿಲ್ಲ.
ಮೆಟ್ರೋ ಮಣ್ಣಿಲ್ಲ: ಯಶವಂತಪುರದಿಂದ ಪೀಣ್ಯ ಮಾರ್ಗದಲ್ಲಿ ಮೆಟ್ರೊ ಕಾಮಗಾರಿ ಭರದಿಂದ ಸಾಗುತ್ತಿದೆ. ಇಲ್ಲಿ ಯಥೇಚ್ಛವಾಗಿ ಮಣ್ಣು ಉತ್ಪತ್ತಿಯಾಗುತ್ತಿದೆ.
ಈ ಬಗ್ಗೆ ಮೆಟ್ರೊ ಅಧಿಕಾರಿಗಳನ್ನು ವಿಚಾರಿಸಿದರೆ, ನಮ್ಮ ಕೆಲಸ ಮೆಟ್ರೊ ಕಾಮಗಾರಿಯಷ್ಟೆ, ಇದರಿಂದ ಉಂಟಾದ ಮಣ್ಣನ್ನೆಲ್ಲಾ ತೆರವುಗೊಳಿಸಿದ್ದೇವೆ. ಆದರೆ ಈ ಭಾಗದಲ್ಲಿನ ಕೆಲ ಸಾರ್ವಜನಿಕರು ಮೆಟ್ರೊ ಕಾಮಗಾರಿಯನ್ನೇ ನೆಪ ಮಾಡಿಕೊಂಡು ರಾತ್ರಿ ಹೊತ್ತು ಹೊರಗಿನಿಂದ ಮಣ್ಣು ತಂದು ರಸ್ತೆಯಲ್ಲಿ ಸುರಿಯುತ್ತಿದ್ದಾರೆ ಎಂದು ಹೇಳುತ್ತಾರೆ.
ಇದು ಕಾಮಗಾರಿಗೂ ಅಡ್ಡಿ ಉಂಟು ಮಾಡಿದ್ದು, ನಾವು ಎಷ್ಟು ಹೇಳಿದರೂ ಕೇಳುತ್ತಿಲ್ಲ. ಬಿಬಿಎಂಪಿಗೂ ದೂರು ನೀಡಿದ್ದೇವೆ. ಅವರು ಸಹ ಸರಿಯಾಗಿ ಸ್ಪಂಧಿಸುತ್ತಿಲ್ಲ ಎನ್ನುತ್ತಾರೆ ಅವರು.
ಪಾದಚಾರಿಗಳ ಸಮಸ್ಯೆ: ಮೆಟ್ರೊ ಕಾಮಗಾರಿ ಹೆಸರಿನಲ್ಲಿ ಖಾಸಗಿಯವರು ಮಣ್ಣನ್ನು ಸಾರ್ವಜನಿಕರು ಓಡಾಡುವ ಫುಟ್‌ಪಾತ್  ಮೇಲೆ ಹಾಕಿದ್ದಾರೆ. ಇದರಿಂದಾಗಿ ಪಾದಚಾರಿಗಳು ಬೇರೆ ಮಾರ್ಗವಿಲ್ಲದೆ, ವಾಹನಗಳಿಂದ ತುಂಬಿರುವ ರಸ್ತೆಯಲ್ಲೇ ಓಡಾಡಬೇಕಾಗಿದೆ. ಇದು ಅಪಘಾತಗಳಿಗೂ ಎಡೆಮಾಡಿಕೊಟ್ಟಿದೆ.
ನಗರದ ತುಂಬೆಲ್ಲಾ ಧೂಳು: ಮಣ್ಣಿನ ರಾಶಿಯ ಪರಿಣಾಮ ಯಶವಂತಪುರದಿಂದ ಜಾಲಹಳ್ಳಿ ಮಾರ್ಗದಲ್ಲಿ ಧೂಳು ಹೆಚ್ಚಾಗಿದೆ.
ಇದರಿಂದ ವಾಯು ಮಾಲಿನ್ಯ ಉಂಟಾಗುವುದರ ಜೊತೆಗೆ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಅಲ್ಲದೆ, ಸ್ಥಳೀಯರಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ ಎನ್ನುತ್ತಾರೆ ಸಾರ್ವಜನಿಕರು.
       ಸಮಸ್ಯೆಗಳು...
ರಸ್ತೆ ಮಣ್ಣಿನಿಂದ ತುಂಬಿಹೋಗಿದೆ
ಯಶವಂತಪುರವನ್ನು ಧೂಳು ಆವರಿಸಿಕೊಳ್ಳುತ್ತಿದೆ
ಯಾವಾಗಲು ಟ್ರಾಫಿಕ್‌ಜಾಮ್
ಫುಟ್‌ಪಾತ್ ಕಳೆದು ಹೋಗಿದೆ
ಸಾರ್ವಜನಿಕರಿಗೆ ಮತ್ತಷ್ಟು ಸಮಸ್ಯೆ
ಯಶವಂತಪುರದಿಂದ ಜಾಲಹಳ್ಳಿ ಧೂಳಿನ ಮಾರ್ಗ
ಟ್ರಾಫಿಕ್ ಸಮಸ್ಯೆ ಇನ್ನೂ ಹೆಚ್ಚಾಗಲು ಕಾರಣ
ಕಾಮಗಾರಿಗೂ ಅಡ್ಡಿ ಉಂಟಾಗುತ್ತಿದೆ

ಟ್ರಾಫಿಕ್ ಜಾಮ್: ಈ ರಸ್ತೆ ಯಾವಾಗಲೂ ವಾಹನಗಳಿಂದ ಗಿಜಿಗುಡುತ್ತದೆ. ಇದರ ಮಧ್ಯೆ ಮೆಟ್ರೊ ಕಾಮಗಾರಿಗಾಗಿ ರಸ್ತೆಯನ್ನು ಒಡೆದು ಟ್ರಾಫಿಕ್ ಹೆಚ್ಚಾಗಿತ್ತು. ಈಗ ಮಣ್ಣು ರಸ್ತೆಗೆ ಬಂದಿದೆ. ಇದು ಟ್ರಾಫಿಕ್ ಸಮಸ್ಯೆ ಇನ್ನೂ ಹೆಚ್ಚಾಗಲು ಕಾರಣವಾಗಿದೆ.
-ವಿಜಯ್. ಆರ್. ಹೊಸನಗರ

ಸಮಸ್ಯೆ ಇರುವುದು ನಿಜ. ಇದಕ್ಕೆ ನಾವು ಹೊಣೆಗಾರರಲ್ಲ ನಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಸಾರ್ವಜನಿಕರು ರಾತ್ರೋ ರಾತ್ರಿ ಮಣ್ಣನ್ನು ತಂದು ಹಾಕುತ್ತಿದ್ದಾರೆ. ಇದರ ಬಗ್ಗೆ ಬಿಬಿಎಂಪಿಗೂ ದೂರು ನೀಡಿದ್ದೇವೆ. ಅವರೇ ಇದರ ಬಗ್ಗೆ  ಗಮನ ಕೊಡದೆ ನಿರ್ಲಕ್ಷಿಸುತ್ತಿದ್ದಾರೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
- ಬಿ.ಎಲ್.ವೈ ಚೌಹಾಣ್, ಮೆಟ್ರೊ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ

ಕೂಲಿ ಕಾರ್ಮಿಕರಿಗೆ ನಿರುಪಯುಕ್ತ ಮಣ್ಣನ್ನು ಎಲ್ಲಿ ಹಾಕಬೇಕು ಎಂಬ ಬಗ್ಗೆ ಅರಿವಿರುವುದಿಲ್ಲ. ಕಟ್ಟಡ ಮಾಲೀಕರು ಅಥವಾ ಗುತ್ತಿಗೆದಾದರು ಈ ಬಗ್ಗೆ ಸೂಚನೆ ನೀಡಿ ಕಳುಹಿಸಬೇಕು. ಇಲ್ಲವಾದಲ್ಲಿ ಸಿಕ್ಕಿಬಿದ್ದಾಗ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು.
- ಎಂ.ಎಂ.ಮಹದೇವಯ್ಯ, ಡಿಸಿಪಿ, ಪಶ್ಚಿಮ ವಿಭಾಗ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ