ಬೆಳಗಾವಿ: ನಗರದ ಶೆಟ್ಟಿ ಗಲ್ಲಿಯ ಎಫ್-5 ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಜೂ.20 ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಂದು ಶೆಟ್ಟಿ ಗಲ್ಲಿಯ ಎಫ್-5 ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವುದರಿಂದ ಐಬಿ, ಕೇಂದ್ರ ಬಸ್ ನಿಲ್ದಾಣ, ಶೆಟ್ಟಿ ಗಲ್ಲಿ, ಚವಾಟ ಗಲ್ಲಿ. ನಾನಾ ಪಾಟೀಲ್ ಚೌಕ, ದರಬಾರ ಗಲ್ಲಿ, ಜಾಲಗಾರ ಗಲ್ಲಿ, ಕಸಾಯಿ ಗಲ್ಲಿ, ಅರಣ್ಯ ಇಲಾಖೆ, ಕೋತವಾಲ ಗಲ್ಲಿ, ಡಿಸಿಸಿ ಬ್ಯಾಂಕ್, ಖಡೇ ಬಜಾರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯ ಉಂಟಾಗಲಿದೆ ಎಂದು ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
22ರಂದು ಪಿಂಚಣಿ ಅದಾಲತ್
ಬೆಳಗಾವಿ: ಉತ್ತರ ಕರ್ನಾಟಕ ವಲಯದ ಅಂಚೆ ಇಲಾಖೆಯ ಪಿಂಚಣಿದಾರರ ಪಿಂಚಣಿ ಅದಾಲತ್ ಜುಲೈ 22 ರಂದು ಬೆಳಗ್ಗೆ 11 ಗಂಟೆಗೆ ಧಾರವಾಡದ ಅಕ್ಕನ ಬಯಲು ರಂಗ ಮಂದಿರದ ಬಳಿಯ ಉತ್ತರ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಕಾರ್ಯಾಲಯದಲ್ಲಿ ನಡೆಯಲಿದೆ. ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲ್ಯಭ್ಯಗಳ ಹಾಗೂ ಕುಟುಂಬ ಪಿಂಚಣಿದಾರರ ಅಹವಾಲುಗಳನ್ನು ಅದಾಲತ್‌ನಲ್ಲಿ ಆಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಂಸ್ಥಾಪನಾ ದಿನ ಆಚರಣೆ
ಬೆಳಗಾವಿ: ಇಲ್ಲಿನ ಬೆಳಗಾವಿ ಶಿಕ್ಷಣ ಸಂಸ್ಥೆಯ ಎನ್‌ಎಸ್‌ಪೈ ಶಾಲೆಯ 22ನೇ ಸಂಸ್ಥಾಪನಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ನರ್ಸರಿ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅತಿಥಿಯಾಗಿದ್ದ ಮನಿಷ ತಡೆಕೊಡ ಅವರು ಶಾಲೆ ವಾಟರ್ ಕೂಲರ್ ದಾನವಾಗಿ ನೀಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ಎನ್. ಶಿವಣಗಿ, ಸುಧೀರ ಕುಲಕರ್ಣಿ, ರಾಘವೇಂದ್ರ ಜೋಶಿ, ಅಶೋಕ ದೇಸಾಯಿ, ಎಸ್.ಆರ್. ತಗಾರೆ, ಸಂಧ್ಯಾ ಪೂಜಾರ ಮೊದಲಾದವರು ಇದ್ದರು. ಶಾಲೆಯ ಮುಖ್ಯಾಧ್ಯಾಪಕಿ ರಾಧಿಕಾ ನಾಯಿಕ ಸ್ವಾಗತಿಸಿದರು. ಸುಮನ ಜೋಶಿ ಮತ್ತು ಆರ್.ಆರ್. ದೇಸಾಯಿ ನಿರೂಪಿಸಿದರು. ಸರಿತಾ ಕಾವಳೆ ವಂದಿಸಿದರು.
ನಾಳೆ ಸೊಸೈಟಿ ಉದ್ಘಾಟನೆ
ಬೆಳಗಾವಿ: ಸಂಗಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಉದ್ಘಾಟನೆ ಸಮಾರಂಭ ಜೂ.21 ರಂದು ಬೆಳಗ್ಗೆ 11 ಗಂಟೆಗೆ ನಗರದ ಕಚೇರಿ ರಸ್ತೆಯಲ್ಲಿ ನಡೆಯಲಿದೆ. ರುದ್ರಾಕ್ಷಿಮಠದ ಡಾ.ಸಿದ್ಧರಾಮ ಸ್ವಾಮೀಜಿ ಹಾಗೂ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸ್ಥಾಪಕ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.